Month: December 2025

ಕ್ಯಾಲೆಂಡರ್ ಬದಲಾದರೆ ಹೊಸ ವರ್ಷ ಬಂದಂತಾಯ್ತೆ? ಮದಿರೆಯ ನಶೆಯಲ್ಲಿ ತೇಲಿದರೆ…ಪಟಾಕಿ ಸಿಡಿಸಿದರೆ…..ವಿಷದ ಸಿಹಿ ತಿಂದರೆ….ಪ್ರಾಕೃತಿಕ ಸೌಂದರ್ಯ ಕಲುಷಿತಗೊಳಿಸಿದರೆ ಬಂದಂತಾಯ್ತೆ ಹೊಸ ವರ್ಷ? ಎಲ್ಲ ಬದಿಗಿರಿಸಿ ತೆರೆದ ಕಣ್ಣಿಂದ ನೋಡು… ಪ್ರತಿನಿತ್ಯವೂ ಸೃಷ್ಟಿಯ ಹೊಸ ಪರ್ವದಾರಂಭ ! – ಶ್ರೀವಾಣಿ

ಪಿ.ಆರ್.ಓ.ಗಳ ತಪ್ಪಿನಿಂದ ರಾಗಿ ಮಾರಾಟಕ್ಕೆ ತೊಂದರೆ- ವಪ್ಪುಣಸೆ ಗ್ರಾಮಸ್ಥರ ದೂರು

ಕಡೂರು :ರಾಗಿ ಬೆಳೆಯಿದ್ದರೂ ದರ್ಶಕ್ ಆಪ್ ನಲ್ಲಿ ರಾಗಿ ಎಂದು ನಮೂದಿಸದೆ ಪಿಆರ್.ಓ. ಗಳು ತಪ್ಪೆಸಗಿದ ಕಾರಣ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟಕ್ಕೆ ತೊಂದರೆಯಾಗಿದೆ ಎಂದು ವಪ್ಪುಣಸೆ ಗ್ರಾಮಸ್ಥರು ದೂರಿದರು. ತಾಲ್ಲೂಕಿನ ಬಾಸೂರು ಗ್ರಾಮದಲ್ಲಿ ಮಂಗಳವಾರ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ…

ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ ಆಚರಣೆ

ಸೌಮ್ಯ ಯೋಗಾನರಸಿಂಹ ಸ್ವಾಮಿ ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ ಆಚರಣೆ ಕಡೂರು: ಮಚ್ಚೇರಿಯ ಸೌಮ್ಯ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಸೌಮ್ಯ ಯೋಗಾನರಸಿಂಹ ಸ್ವಾಮಿಗೆ ಮಹಾಮಂಗಳಾರತಿ ಐತಿಹಾಸಿಕ ಸೌಮ್ಯ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ…

ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ

ಕಡೂರು: ತಾಲೂಕಿನ ಗ್ರಾಮವೊಂದರಲ್ಲಿ ಐದು ವರ್ಷದ ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸರ ಕಾರ್ಯಾಚರಣೆಯಿಂದಾಗಿ ಬಾಲಕಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾಳೆ. ಘಟನೆ ವಿವರ: ಕಡೂರು ಪಟ್ಟಣಕ್ಕೆ ಹತ್ತಿರವಿರುವ ಗ್ರಾಮದ ಕುಟುಂಬವೊಂದರ ಐದು ವರ್ಷದ ಬಾಲಕಿ ಭಾನುವಾರ ಬೆಳಿಗ್ಗೆ 10.30…

6 ನೇ ವಾರ್ಡ್ ಮೀಸಲಾತಿ ಬದಲಾಯಿಸುವ ಹುನ್ನಾರ- ಹೋರಾಟಕ್ಕೆ ಸಿದ್ದ- ಕೆ.ಎಸ್.ಶಂಕರ್

ಕಡೂರು ಪಟ್ಟಣದ 6 ನೇ ವಾರ್ಡ್ ಮೀಸಲಾತಿ ಬದಲಾಯಿಸಿದರೆ ಉಗ್ರ ಹೋರಾಟ- ಕೆ.ಎಸ್.ಶಂಕರ್ ಕಡೂರು: ಎಸ್.ಸಿ( ಮಾದಿಗ) ಜನಾಂಗದವರೇ ಹೆಚ್ಚಿರುವ ಅಂಬೇಡ್ಕರ್ ನಗರ 6ನೇ ವಾರ್ಡಿನ ಮೀಸಲಾತಿ ಬದಲಿಸುವ ಹುನ್ನಾರ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಉಗ್ರ ಹೋರಾಟಕ್ಕೂ ಸಿದ್ಧ ಎಂದು ಜಿಲ್ಲಾ…

ಭಗವದ್ಚಿಂತನೆಗೆ ಸಮಯ ನೀಡಿ- ವಿಧುಶೇಖರ ಶ್ರೀ

ಕಡೂರು: ದೈನಂದಿನ ಜೀವನದಲ್ಲಿ ಸ್ವಲ್ಪ ಹೊತ್ತಾದರೂ ಭಗವದ್ಚಿಂತನೆಯಲ್ಲಿ ಕಳೆದರೆ ನಮ್ಮೆಲ್ಲ ಕಾರ್ಯಗಳಲ್ಲಿ ಯಶಸ್ಸು ಪಡೆಯಲು ಬೇಕಾದ ಸ್ಥೈರ್ಯ ದೊರೆಯುತ್ತದೆ ಎಂದು ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು. ಕಡೂರಿನ ಕೋಟೆ ಶಂಕರ ಮಠದಲ್ಲಿ ಬುಧವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ…

ಕಡೂರಿಗೆ ಶೃಂಗೇರಿ ಜಗದ್ಗುರುಗಳ ಆಗಮನ

ಕಡೂರು: ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕಡೂರಿಗೆ ಮಂಗಳವಾರ ಸಂಜೆ ಆಗಮಿಸಿದರು. ಕಡೂರಿಗೆ ಆಗಮಿಸಿದ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು… .ಕೋಟೆ ಶಾರದಾ ಮಠದ ಬಳಿ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.…

ಡಿಸೆಂಬರ್ 23 ರಂದು ಕಡೂರಿಗೆ ಶೃಂಗೇರಿ ಕಿರಿಯ ಜಗದ್ಗುರುಗಳು

ಕಡೂರು: ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು ಡಿಸೆಂಬರ್ 23 ರ ಮಂಗಳವಾರ ಕಡೂರಿಗೆ ಆಗಮಿಸಲಿದ್ದಾರೆ ಎಂದು ಕಡೂರು ಶೃಂಗೇರಿ ಶಾರದಾ ಮಠದ ಆಡಳಿತಾಧಿಕಾರಿ ಬೀರೂರು ಮಂಜುನಾಥ್ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಮಂಗಳವಾರ ಸಂಜೆ…

ಸಾಂಘಿಕ ಪ್ರಯತ್ನಕ್ಕೆ ಯಶಸ್ಸು- ನಾಗರಾಳು ಕೆರೆಗೆ ನೀರು

ಬೆಳವಾಡಿಕರೆ ಹಳ್ಳದಿಂದ ನಾಗರಾಳು ಕೆರೆಗೆ ನೀರು ಹರಿಸಲು ಪಂಪ್ ಅಳವಡಿಸಿರುವುದು ಕಡೂರು: ತಾಲ್ಲೂಕಿನ ನಾಗರಾಳು ಗ್ರಾಮದ ರೈತರು ತಮ್ಮ ಊರಿನ ಕೆರೆ ತುಂಬಿಸಲು ತಾವೇ ಕಾರ್ಯಪ್ರವೃತ್ತರಾಗಿ ಮಾಡಿದ ಸಾಂಘಿಕ ಯತ್ನಕ್ಕೆ ಯಶಸ್ಸು ದೊರೆತಿದೆ. ಕೆರೆಗೆ ಜೀವಜಲ ಹರಿಯಲಾರಂಭಿಸಿದೆ. ನಾಗರಾಳು ಗ್ರಾಮದ ಕೆರೆ…

ರಕ್ತದಾನ ಮಾಡಿ ಜೀವವುಳಿಸಿ – ರಘುರಾಂ

ಕಡೂರು: ರೋಟರಿ ಕ್ಲಬ್ ವತಿಯಿಂದ,ಶಿವಮೊಗ್ಗ ರೋಟರಿ ಮಿಡ್ ಟೌನ್ ಚಾರಿಟಿ ಫೌಂಡೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ರಕ್ತದಾನ ಶಿಭಿರ ಏರ್ಪಡಿಸಲಾಗಿತ್ತು. ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರ ಉದ್ಘಾಟಿಸಿದ ರೋಟರಿ ಅಧ್ಯಕ್ಷ ರಘುರಾಂ, ಮಾತನಾಡಿ, ಸಮಾಜಿಕ…

error: Content is protected !!