ಕಣ್ಣನ್ ಮಾಮಾ ಅವರ ಸುಲಿದ ಬಾಳೆಯ ಹಣ್ಣಿನಂದದ ಕನ್ನಡದ ಸವಿಮಾತು


ಕನ್ನಡದ ದೀವಟಿಗೆ ಸಾತತ್ಯ ನೀಡಿದ ಹಿರೇಮಗಳೂರು ಕಣ್ಣನ್

ಚಿಕ್ಕಮಗಳೂರಿನ ಸಾಂಸ್ಕೃತಿಕ ವಕ್ತಾರೆ ನಾಗಶ್ರೀ ತ್ಯಾಗರಾಜ್
ಒಂದು ವಿಚಾರ ತಮ್ಮೊಡನೆ ಹಂಚಿಕೊಳ್ಳುವುದಿದೆ….
ಹಾಗೇ ಸುಮ್ಮನೆ ಎಂಬುವುದು…ನನ್ನ ಅಂಕಣ ಬರಹ….ಜನಮಿತ್ರ ಪತ್ರಿಕೆಯಲ್ಲಿ ಇದು ಪ್ರಕಟವಾಗುತ್ತಿತ್ತು..ನಿರ್ಧಿಷ್ಠ ವಿಷಯವಿಲ್ಲದೆ ತೋಚಿದ್ದನ್ನು ಗೀಚುವ ಮೂಲಕ ಹಲವಾರು ವಿಚಾರಗಳನ್ನು ಇಲ್ಲಿ ಬರೆಯುತ್ತಿದ್ದೆ…..
ಇಂದು ನನ್ನ ವೆಬ್ ಸೈಟ್ ನಲ್ಲಿ ಚಿಕ್ಕಮಗಳೂರಿನ ಸಾಂಸ್ಕೃತಿಕ ವಕ್ತಾರೆ ಸೋದರಿ ನಾಗಶ್ರೀ ತ್ಯಾಗರಾಜ್ ಅವರ ಚಿಕ್ಕಮಗಳೂರು ಟು ಚಿಕಾಗೋ ಕೃತಿಯ ಬಗ್ಗೆ ಒಂದಿಷ್ಟು ಬರೆದಿದ್ದೆ...ಅದು ನನ್ನ ಹೃದಯದ ಮಾತು… ಅಳಸಿಂಗರು ನಮ್ಮವರೆಂಬ ಅಭಿಮಾನದ ಮಾತು…ನಾಗಶ್ರೀಯವರ ಮನೋಜ್ಞ ಕೃತಿ ರಚನೆಯ ಸಾಮರ್ಥ್ಯದ ಬಗ್ಗೆ ಅಭಿಮಾನದ ಸಾಲುಗಳು…..
ಸುಮಾರು 35 ವರ್ಷಗಳ ಹಿಂದೆ ಕನ್ನಡದ ದೀವಟಿಗೆಗೆ ಸಾತತ್ಯ ಹಿಡಿದ ಡಾಹಿರೇಮಗಳೂರು ಕಣ್ಣನ್ ಮಾಮ ಅವರ ತಂದೆ ಸವ್ಯಸಾಚಿ ಸ್ವಾಮೀಜಿಯವರಿಗೆ 60 ವರ್ಷ ತುಂಬಿದಾಗ ನನ್ನ ಅಳಸಿಂಗ- ನಿನ್ನ ವಿವೇಕಾನಂದ ಕೃತಿ ಪ್ರಕಟಿಸಿದ್ದರು. ಆಗ ನನಗೆ ಕಣ್ಣನ್ ಮಾಮ ಆ ಪುಸ್ತಕ ನೀಡಿದ್ದರು. ಆಗ ನನಗೆ 16 ವರ್ಷವಿರಬಹುದು… ಆಗ ಆ ಪುಸ್ತಕವನ್ನೋದಿ ನಾನು ವಿವೇಕಾನಂದರನ್ನು ಚಿಕಾಗೋಗೆ ಕಳುಹಿಸಿದ ಅಳಸಿಂಗ ಪೆರುಮಾಳರು ನನ್ನ ಕಡೂರಿನವರು ಎಂದು ಒಂದೆಡೆ ಬರೆದುಬಿಟ್ಟೆ.
ಒಬ್ಬರು ಕೂಡಲೇ ಹೇಳಿದ್ದು ಅವರು ಚಿಕ್ಕಮಗಳೂರಿನವರು.ಕಡೂರಿನವರಲ್ಲ ಎಂದರು.
ಇಲ್ಲ…ಅವರು ಕಡೂರಿನವರು…ಕಡೂರು ಜಿಲ್ಲೆಯಾಗಿತ್ತಲ್ಲ…ಹಾಗಾಗಿ ಅವರು ಕಡೂರಿನವರು ಎಂದು ಉತ್ತರಿಸಿದ್ದೆ!
ನಂತರ ಅಳಸಿಂಗರ ಬಗ್ಗೆ ಓದಿದ್ದು ಪುಟ್ಟಮ್ಮನ ಚಿಕ್ಕಮಗಳೂರು ಟು ಚಿಕಾಗೋ ಪುಸ್ತಕದಲ್ಲಿ. ನಿಜಕ್ಕೂ ಮತ್ತೊಮ್ಮೆ ನನ್ನ ಅಭಿಮಾನ ಗರಿಗೆದರಿತು.
ತೋಚಿದ್ದು ಗೀಚಿದೆ.
ಅದಕ್ಕೂ ಮುನ್ನ ನಾಗಶ್ರೀಯವರು ನಿತ್ಯ ಕೆ.ಸಿ.ಶಿವಪ್ಪ ಅವರ ಮುದ್ದುರಾಮನ ವಚನಗಳನ್ನು ಪ್ರಸ್ತುತಪಡಿಸುವ ವಿಚಾರ ಪ್ರಸ್ತಾಪಿಸಿ ಮುದ್ದುರಾಮನ ಮುಕ್ತಕಗಳು ಮಂಕುತಿಮ್ಮನ ಕಗ್ಗದಂತೆ ಎಂದು ಹೇಳಿದ್ದೆ.
ಅದನ್ನೋದಿ ಕಣ್ಣನ್ ಮಾಮ ತಮ್ಮದೇ ಧ್ವನಿಯಲ್ಲಿ ಸಂದೇಶ ಕಳುಹಿಸಿದ್ದಾರೆ….ಅದನ್ನು ಕೇಳಿ ಮನಸ್ಸು ತುಂಬಿಬಂತು..
ನೇರ ನಡೆ ನುಡಿಯ ಕಣ್ಣನ್ ಅವರ ಅಭಿಮಾನ ಹಾರೈಕೆ ದೊರೆಯುವುದು ಸುಲಭವೇ?
ಅವರದೇ ಧ್ವನಿಯ ಹಾರೈಕೆಯನ್ನು ಹಾಗೆಯೇ ಇಲ್ಲಿ ಕೊಟ್ಟಿರುವೆ….
ಇದಕ್ಕೆ ಕಾರಣ ಪುಟ್ಟಮ್ಮ…
ಮತ್ತಷ್ಟು ಕೃತಿ ಅವರಿಂದ ಹೊರಬರಲಿ….
ಕಣ್ಣನ್ ಮಾಮಾ ಹಾರೈಕೆಗೆ
ನಮನ…ನಮನ….ನಮನ……
———-
ಶಿವಪ್ಪ ನವರ ಮುದ್ದುರಾಮನ ಕಗ್ಗ ಮಂಕುತಿಮ್ಮನ ಕಗ್ಗಕ್ಕೆ ಹತ್ತಿರ ಎಂದು ನಾನು ಹೇಳಿದ್ದು ಇದಕ್ಕಾಗಿ.
ಪುಟ್ಟಮ್ಮ- ಕಣ್ಣನ್ ಮಾಮ ಇಬ್ಬರಿಗೂ ಮತ್ತೊಮ್ಮೆ ನಮನ….
ಇದನ್ನು ಕೇಳಿದಾಗ ಮಂಕುತಿಮ್ಮನ ಕಗ್ಗ ನೆನಪಾಯ್ತು….
ಒಂದಗಳು ಹೆಚ್ಚಿರದು; ಒಂದಗಳು ಕೊರೆಯಿರದು |ತಿಂದು ನಿನ್ನನ್ನಋಣ ತೀರುತಲೆ ಪಯಣ ||ಹಿಂದಾಗದೊಂದು ಚಣ; ಮುಂದಕುಂ ಕಾದಿರದು |ಸಂದ ಲೆಕ್ಕವದೆಲ್ಲ – ಮಂಕುತಿಮ್ಮ.
ಹೇಳಿ ಶಿವಪ್ಪನವರ ಮುದ್ದುರಾಮನ ಕಗ್ಗದ ಮುಕ್ತಕ ಮಂಕುತಿಮ್ಮನ ಕಗ್ಗದಷ್ಟೇ ಅರ್ಥಪೂರ್ಣವಲ್ಲವೆ?
ಶಿವಪ್ಪನವರು ಹೀಗೆ ಬರೆದರೆ ಹೇಗಿರುತ್ತದೆ?
ಮುದ್ದುರಾಮನು ನಾನು ಮಂಕುತಿಮ್ಮನ ತಮ್ಮ.
ಸಂದ ನೆನ್ನೆಯ ಯೋಚಿಸದೆ- ಬರುವ ನಾಳೆಗೆ ಬೆದರದೆ.
ಇಂದಿರುವ ಸಮಯವ ಸದುಪಯೋಗ ಪಡೆವತ್ತ ಚಿತ್ತ.
ಪಲಾಫಲ ಗುರುವಿಗೆ- ಮುದ್ದುರಾಮ
ಏನಂತೀರಿ?

ಅಕ್ಷರಗಳಲ್ಲೇ ಎಲ್ಲರನ್ನು ಸೆಳೆಯುವ ನೈಪುಣ್ಯತೆ ನಿಮಗೆ ಸಿದ್ಧಿಸಿದೆ ಬಾಲಣ್ಣ..
ನಿಮ್ಮ ಅಭಿಮಾನಕ್ಕೆ ನಮೋ ನಮಃ
ನಮ್ಮ ಜಿಲ್ಲೆಯ ಸಾಂಸ್ಕೃತಿಕ ವಕ್ತಾರೆ ನೀವು…ನಿಮ್ಮ ಬಗ್ಗೆ ಬರೆಯುವುದೇ ಒಂದು ಅಪೂರ್ವ ಅವಕಾಶ