Spread the love
ಆತ್ಮೀಯರೆ
ಲತಾರಾಜು….ಪ್ರಬುದ್ಧ ಲೇಖಕಿ….ಕಥೆಗಾರ್ತಿ….ಕವಯಿತ್ರಿ… ತಮ್ಮದೇ ಶೈಲಿಯ ಬರವಣಿಗೆಯಲ್ಲಿ ಕಥಾ ಸಂಕಲನ ನಿರಾಳ ಪ್ರಕಟಿಸಿದ್ದಾರೆ….ಈ ವೆಬ್ ಸೈಟ್ ನಲ್ಲಿ ವಾರಕ್ಕೊಂದು ಅಂಕಣ ಬರಹ ಬರೆಯಲಿದ್ದು, ಹಾಗೇ ಸುಮ್ಮನೆಯಲ್ಲಿ ಪ್ರಕಟವಾಗಲಿದೆ……..ಓದುಗರಲ್ಲಿ ಒಂದಿಷ್ಟು ಅರಿವು ಹೆಚ್ಚಲಿದೆ…
———–
ಸ್ನೇಹಿತರೆ, ಈ ಎರಟೋಮೇನಿಯ ಬಹುಷಃ ಹೊರ ಜಗತ್ತಿಗೆ ಸ್ವಲ್ಪ ಅಪರಿಚಿತ, ಅಪರೂಪದ ಪದ, ಇದು ಬಹುತೇಕವಾಗಿ ವೈದ್ಯ ಜಗತ್ತಿನಲ್ಲಿ, ಅದರಲ್ಲೂ ಮನೋವೈದ್ಯಕೀಯ ಜಗತ್ತಿನಲ್ಲಿ ಬಹುತೇಕ ಪರಿಚಿತ ಪದ & ಸಮಸ್ಯೆ.
 ಎರಟೊಮೇನಿಯ ಒಂದು ಕಾಯಿಲೆಯ ಎಂದರೆ, ಹೌದು ಇದು ನಿಸ್ಸಂದೇಹವಾಗಿ ಒಂದು ಮಾನಸಿಕ ಕಾಯಿಲೆ. ಈ ಕಾಯಿಲೆಗೆ ಒಳಗಾದ ವ್ಯಕ್ತಿಗಳು ನಮ್ಮ, ನಿಮ್ಮ ನಡುವೆ ಇದ್ದರೂ ನಾವು ಸುಲಭವಾಗಿ ಗುರುತಿಸಲಾಗದಂತಹ ಒಂದು ಗುರುತರ ಕಾಯಿಲೆ. ಈ ಕಾಯಿಲೆಯ ಆಳ – ಅಗಲದ ಅರಿವು ಸುಲಭವಾಗಿ ದಕ್ಕುವಂತದ್ದಲ್ಲ….. ಇದರಲ್ಲಿ ರೋಗಿಗಳು ಮೊದಮೊದಲಿಗೆ ಸಾಮಾನ್ಯವಾಗಿ ವರ್ತಿಸುತ್ತಾರೆ, ಆದರೆ ಈ ಕಾಯಿಲೆಗೊಳಗಾದವರು ತಮ್ಮನ್ನು ತಾವು ಕೆಲವು ಸಂದರ್ಭಗಳಲ್ಲಿ ನಿಗ್ರಹಿಸಿಕೊಳ್ಳಲಾರದೆ ಹೋಗುತ್ತಾರೆ. ಈ ಕಾಯಿಲೆ ಹೊಂದಿದವರು, ಸಲಿಂಗಿಗಳಾಗಿರುತ್ತಾರೆ…. ಇವರು ಸೆಕ್ಸ್ ಅಥವಾ ಕಾಮದ ಕುರಿತು ಬಹಳಷ್ಟು ಭ್ರಮೆಗಳನ್ನು ಹೊಂದಿರುತ್ತಾರೆ, ಇವರು ಎಂದಿಗೂ ಸೆಕ್ಸ್ ನ ಸುಖವನ್ನು, ಅನುಭವವನ್ನು ತಮ್ಮ ಸಂಗಾತಿಗಳೊಂದಿಗಾಗಲಿ, ಅಥವಾ ವಿರುದ್ಧ ಲಿಂಗಿಗಳೊಂದಿಗಾಗಲಿ ಅನುಭವಿಸಲಾರರು, ಇವರು ಬಹು ಮುಖ್ಯವಾಗಿ ತಮ್ಮದೇ ಲಿಂಗಸ್ತರ ಜೊತೆ ಒಂದು ಕಾಮ ಜೀವನವನ್ನು ನಡೆಸುತ್ತಾರೆ.   ಆದರೆ ಇವರೆಂದಿಗೂ ಒಬ್ಬ ಸಂಗಾತಿಯೊಂದಿಗೆ ಬಾಳು ನಡೆಸಲಾರರು… ಇವರು ಒಂದು ಭ್ರಮೆ ಜೊತೆಗೆ ಬದುಕುತಿರುತ್ತಾರೆ, ಅದೆಂದರೆ ಸುಖ ಸುಮ್ಮನೆ ತಾವು ಇಷ್ಟಪಟ್ಟ ವ್ಯಕ್ತಿ ತಮ್ಮನ್ನು ಪ್ರೀತಿಸುತ್ತಾರೆ, ತಮ್ಮ ವಿನಹ ಅವರಿಗೆ ಬದುಕಿಲ್ಲ, ತಾವೇ ಅವರ ಬಾಳಿನ ಸರ್ವಸ್ವ ಎಂದು ನಂಬಿರುತ್ತಾರೆ. ಇದು ಬಹು ದೊಡ್ಡ ಮಾನಸಿಕ ಸಮಸ್ಯೆ, ಇವರು ಸಾಮಾನ್ಯವಾಗಿ ತಮಗಿಂತ ಉತ್ತಮ ಸ್ತರದಲ್ಲಿರುವವರನ್ನು ಆರಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ತಮಗಿಂತ ಬುದ್ಧಿವಂತರು, ಜಾಣರು, ಉತ್ತಮ ವೃತ್ತಿಯಲ್ಲಿರುವವರು, ರೂಪವಂತರು, ಹಣವಂತರು, ಸಾಮಾಜಿಕವಾಗಿ ಎತ್ತರದ ಸ್ಥಾನವನ್ನು ಹೊಂದಿದವರು, ಸಮಾಜದಲ್ಲಿ ಉತ್ತಮ ಮಟ್ಟದಲ್ಲಿ ಗುರುತಿಸಿಕೊಂಡವರು ಇಂಥವರ ಆಯ್ಕೆಯಾಗಿರುತ್ತಾರೆ. ಆದರೆ ಇವರು ತಾವು ಮನಸ್ಸಿನೊಳಗೆ ಅಂದುಕೊಂಡಿದ್ದನ್ನು ಬಹುವಾಗಿ ಹಚ್ಚಿಕೊಂಡು, ಅದನ್ನು ಪಡೆಯುವುದಕ್ಕೋಸ್ಕರ ಏನು ಬೇಕಾದರೂ ಮಾಡುವ ಮನಸ್ಥಿತಿ ಹೊಂದಿರುತ್ತಾರೆ. ಅವರು ಎಂದಿಗೂ ವಾಸ್ತವದ ಕುರಿತು ಚಿಂತಿಸುವುದಿಲ್ಲ, ತಮ್ಮದೇ ಆದ ಒಂದು ಭ್ರಮೆಯನ್ನು ಬೆಳೆಸಿಕೊಂಡು, ತಾವು ಕಟ್ಟಿಕೊಂಡ ಭಾವಗಳ ಸುತ್ತ ಆ ವ್ಯಕ್ತಿಯನ್ನು ಆವಾಹಿಸಿಕೊಂಡು, ತಾವು ಇಷ್ಟಪಡುವ ವ್ಯಕ್ತಿ ತಮ್ಮನ್ನು ತಮ್ಮಷ್ಟೇ, ತೀವ್ರವಾಗಿ ಪ್ರೀತಿಸಬೇಕೆಂದು ಬಯಸುತ್ತಾರೆ ಮತ್ತು ತಾವು ಅಷ್ಟೇ ಅತಿಯಾಗಿ ಅವರನ್ನು ಹಚ್ಚಿಕೊಂಡಿರುತ್ತಾರೆ. ಇವರು ಎಷ್ಟರಮಟ್ಟಿಗೆ ಭ್ರಮೆಯ ಲೋಕದಲ್ಲಿ ಬದುಕುತ್ತಿರುತ್ತಾರೆಂದರೆ, ತಾವು ನೆಚ್ಚಿಕೊಂಡವರನ್ನು ಪಡೆಯಲು ಯಾವುದೇ ಕೆಟ್ಟ ಕೆಲಸಕ್ಕೂ, ಕೆಟ್ಟ ನಡವಳಿಕೆಗೂ ಇಳಿಯಲು ಹಿಂಜರಿಯುವುದಿಲ್ಲ. ಇದು ಕೂಡ ಅಂದರೆ ಈ ಎರಟೊಮೆನಿಯ, ಹತ್ತಿರ ಹತ್ತಿರ ಸ್ಕೀಜೋಫ್ರೆನಿಯ ಕಾಯಿಲೆಯ ಗುಣ ಲಕ್ಷಣ ಹೊಂದಿರುತ್ತದೆ, ಆದರೆ ಅದಕ್ಕಿಂತ ಬಹು ಆತಂಕಕಾರಿ ಕಾಯಿಲೆ ಇದು.  ಇದು ಬರಲು ಕಾರಣಗಳು ನೂರಾರು ಇರಬಹುದು, ಆದರೆ ಇಂತಹದ್ದೇ ಎಂದು ನಿಖರವಾಗಿ ಗುರುತಿಸಲಾಗದು ಎನ್ನುವುದು ಒಂದು ಬಹು ದೊಡ್ಡ ವಿಪರ್ಯಾಸ.  ಈ ಖಾಯಿಲೆಗೆ ಒಳಗಾದವರಿಗೆ, ತಮ್ಮಷ್ಟಕ್ಕೆ ತಮಗೆ ತಾವು ಇಷ್ಟ ಪಡುವ ವ್ಯಕ್ತಿಯ ಮಾತುಗಳು ಕೇಳಿಸಿದಂತೆ, ಅವರ ಎಲ್ಲಾ ನಡವಳಿಕೆಗಳು ತಮಗಾಗೆ ನಡೆದುಕೊಂಡಂತೆ, ಅವರ ಪ್ರತಿ ಮಾತು ತಮಗಾಗಿ ಆಡಿದಂತೆ…. ಅಷ್ಟೇ ಏಕೆ ಅವರು ಮಾಡುವ ಪ್ರತಿ ಕೆಲಸವೂ ತಮಗೋಸ್ಕರವಾಗಿಯೇ ಅಷ್ಟೇ, ಅವರು ಹುಟ್ಟಿರುವುದು…. ಜೀವಿಸುತ್ತಿರುವುದು ಕೇವಲ ತನ್ನನ್ನು ಹೊಂದಲು ಮತ್ತು ತನಗಾಗಿ ಎಂಬ ಅತಿ ದೊಡ್ಡ ಬ್ರಾಂತಿನಲ್ಲಿ ಬದುಕುತ್ತಿರುತ್ತಾರೆ.
                                ಸಾಮಾನ್ಯವಾಗಿ ಈ ರೋಗದ ಲಕ್ಷಣ ಹೊಂದಿರುವ ರೋಗಿಗಳು, ಅತಿ ಬುದ್ಧಿವಂತರು ಮತ್ತು ಸಮಯಕ್ಕೆ ಸರಿಯಾಗಿ ನಾಟಕ ಮಾಡಿಯಾದರೂ ಜನರನ್ನು ಮರಳು ಮಾಡುವ ಕಲೆಯನ್ನು ಪರಿಣಿತಿ ಮಾಡಿಕೊಂಡಿರುತ್ತಾರೆ. ಇವರು ಬೇರೆಯವರಿಗೆ ಸಂಶಯ ಬರದಂತೆ, ತಾವು ಇಷ್ಟಪಡುವ ವ್ಯಕ್ತಿಯನ್ನು ಪಡೆಯಲೆಂದೆ… ರಹಸ್ಯವಾಗಿ ಅವರ ಪ್ರತಿಯೊಂದು ಚಲನವಲನಗಳನ್ನು ಗುರುತಿಸಿ , ಅದನ್ನು ಹಿಂಬಾಲಿಸಿ ಅವರನ್ನು ಹೊಂದಲು ಇನ್ನಿಲ್ಲದ ಗುರುತರ ಪ್ರಯತ್ನಗಳನ್ನು ಮಾಡುತ್ತಾರೆ. ಇವರ ಪ್ರಕಾರ ತಾವು ಹೊಂದಲು ಬಯಸುವ ವ್ಯಕ್ತಿಗಳೊಂದಿಗೆ ಬೇರೆಯವರು ಮಾತನಾಡಿದರು, ಒಡನಾಡಿದರು ಸಹಿಸಲಾರರು….. ಇವರು ಅವರ ಪ್ರತಿ ಚಲನ ವಲನವನ್ನು ಪ್ರತ್ಯೇಕಿಸಿ ಅವರೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಬ್ಬರನ್ನು ತೀವ್ರವಾಗಿ ದ್ವೇಷಿಸುತ್ತಾ ಅವರಿಂದ ತಾವು ಬಯಸುವ ವ್ಯಕ್ತಿಯನ್ನು ಪಾರು ಮಾಡುವುದಾಗಿ ನಂಬಿರುತ್ತಾರೆ. ಇವರು ಬಯಸುವ ವ್ಯಕ್ತಿ ಇವರನ್ನು ಸಹ ಅಷ್ಟೇ ತೀವ್ರವಾಗಿ ಪ್ರೀತಿಸುತ್ತಾರೆ ಎಂದು ತಪ್ಪು ಕಲ್ಪನೆಯಲ್ಲಿ ಇರುತ್ತಾರೆ ಹಾಗಾಗಿ ಇವರು ಅವರೊಂದಿಗೆ ಸಂಪರ್ಕದಲ್ಲಿರುವ ಬೇರೆಲ್ಲ ವ್ಯಕ್ತಿಗಳನ್ನು ಅವರಿಂದ ದೂರ ಮಾಡುವ ಕಾರ್ಯದಲ್ಲಿ ಸದಾ ನಿರತರಾಗಿರುತ್ತಾರೆ. ಹಾಗೆಂದೇ ಇವರು ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಕೆಲವು ಬಾರಿ ಒಂದು ಕೆಟ್ಟ ಸಲಹೆ ಸೂಚನೆ ನೀಡಿ ದೂರ ಆಗುವಂತೆ ಸೂಚಿಸಿರುತ್ತಾರೆ ಆದರೆ ಅದಾಗದಾಗ ಆ ವ್ಯಕ್ತಿಯು ತ ಮ್ಮಿಬ್ಬರ ನಡುವೆ ಬಂದು ತನ್ನವರನ್ನು ತನ್ನಿಂದ ದೂರ ದೂರ ಮಾಡುತ್ತಾರೆ ಎಂದು ಎಣಿಸಿ ಅವರನ್ನು ಯಾರಿಗೂ ತಿಳಿಯದಂತೆ ಅತಿ ಚಾಕ ಚಕ್ಯತೆಯಿಂದ ಮುಗಿಸುವ ಹಂತಕ್ಕೂ ಇಳಿದುಬಿಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ರೋಗಿಗಳು ಸಾಮಾನ್ಯವಾಗಿ ಒಂದು ಕ್ರಿಮಿನಲ್ ಹಿನ್ನೆಲೆ ಹೊಂದಿರುತ್ತಾರೆ ಮತ್ತು ಇವರು ಪೈಶಾಚಿಕ ಮನಸ್ಸನ್ನು ಬುದ್ಧಿಯನ್ನು ರೂಡಿಸಿಕೊಂಡಿರುತ್ತಾರೆ.
                                ಹಲವು ಬಾರಿ ಇವರು ಯಾರು ಊಹಿಸದ ವಿಕೃತಿ ಹೊಂದಿರುತ್ತಾರೆ, ಇಂತಹವರನ್ನು ಗುರುತಿಸಿ ಕಾಯಿಲೆಯನ್ನು ಕಂಡು ಹಿಡಿಯುವುದು ಸ್ವಲ್ಪ ಕಷ್ಟದ ಕೆಲಸ… ಅಕಸ್ಮಾತಾಗಿ ಈ ಕಾಯಿಲೆ ಹೊಂದಿದವರು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು ಅಲ್ಲಿ ವೈದ್ಯರೊಂದಿಗೆ, ದಾದಿಯ ರೊಂದಿಗೆ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಅನುನಯವಾಗಿ ವರ್ತಿಸಿ ಒಂದು ಹಂತದಲ್ಲಿ ಹೊರಬಂದುಬಿಡುತ್ತಾರೆ ಅಷ್ಟರಮಟ್ಟಿಗೆ ಜನರನ್ನು ನಂಬಿಸಿ, ಹೊರಬಂದ ನಂತರ ಮತ್ತದೇ ತಮ್ಮ ಹಳೆಚಳಿಗೆ ಹಿಂತಿರುಗುತ್ತಾರೆ. ಇವರು ಎಷ್ಟೊಂದು ವಿಕೃತವಾಗಿ ವರ್ತಿಸುತ್ತಾರೆಂದರೆ, ಅಕಸ್ಮಾತಾಗಿ ತಾವು ಎಲ್ಲಿಯಾದರೂ ಸಿಕ್ಕಿಹಾಕಿಕೊಂಡರೆ ಎದುರಿಗಿರುವವರನ್ನು ಮಣಿಸಲು ಬೇಕೆಂದೇ ತಮಗೆ ತಾವೇ ಬಾಯಿಯೊಳಗೊ ಗಂಟಲಿನೊಳಗೊ ಕಪಾಳದ ಒಳಭಾಗಕ್ಕೆ ಹಲ್ಲಿನಿಂದ ಬಲವಾಗಿ ಕಚ್ಚಿಕೊಂಡು ಬಾಯಿ ತುಂಬಾ ರಕ್ತ ಕಾರಿಕೊಂಡು ಎದುರುಗಿರುವವರ ಮುಖದ ತುಂಬಾ ಉಗುಳಿಬಿಟ್ಟು ಅವರಿಗೆ ರಕ್ತವಾಂತಿ ಎಂಬ ಭ್ರಮೆ ಹುಟ್ಟು ಹಾಕಿ ತಾವು ಕಣ್ಣು ಮುಚ್ಚಿ ಬಿಡುವುದರೊಳಗೆ ಆ ಜಾಗದಿಂದ ಆ ವ್ಯಕ್ತಿಯಿಂದ ಪಾರಾಗಿಬಿಡುತ್ತಾರೆ. ಕೆಲವೊಮ್ಮೆ ಇದು ಎಷ್ಟು ಅತಿರೇಕಕ್ಕೆ ಹೋಗುತ್ತದೆ ಎಂದರೆ ಸಾರ್ವಜನಿಕ ಸ್ಥಳದಲ್ಲಿ ಪೂರ್ತಿಯಾಗಿ ಬೆತ್ತಲಾಗಿ ಎದುರುಗಿರುವವರಿಗೆ ಒಂದು ಅಸಹ್ಯ ಹುಟ್ಟಿಸಿ ತಾವು ಕ್ಷಣಾರ್ಧದಲ್ಲಿ ಮಾಯವಾಗುವುದು ಇದೆ, ಅಷ್ಟೇ ಅಲ್ಲ ತಮ್ಮದೇ ತ್ಯಾಜ್ಯಗಳನ್ನು ಎಲ್ಲರೆದುರಿಗೂ ಸೇವಿಸಿ ಏನು ಆಗದವರಂತೆ ನಿಂತುಬಿಡುತ್ತಾರೆ, ಅದನ್ನು ಕಂಡು ಬೇರೆಯವರು ಗಲಿಬಿಲಿಯಾಗಿ ಮೈಮರೆತ ಕ್ಷಣದಲ್ಲಿ ಇವರು ಎತ್ತಲೋ ಮಾಯವಾಗಿರುತ್ತಾರೆ. ಇದಷ್ಟೇ ಅಲ್ಲ ಸಾಮಾನ್ಯವಾಗಿ ಇವರು ಬಹು ಮುಗ್ಧರಂತೆ ವರ್ತಿಸಿ ಜನರೊಳಗೆ ಒಂದು ಅನುಕಂಪ ಗಿಟ್ಟಿಸಿ, ಇವರು ಒಳ್ಳೆಯವರು , ಇವರನ್ನು ದೂರುತ್ತಿರುವವರೇ ಸರಿ ಇಲ್ಲ ಎಂಬ ಒಂದು ಭಾವ ಹುಟ್ಟು ಹಾಕುತ್ತಾರೆ. ಆದರೆ ಆ ವ್ಯಕ್ತಿ ಅಂದರೆ ತಾವು ಮೋಹಿಸುವ ವ್ಯಕ್ತಿ ತಮಗೆ ಸಿಗಲೇಬೇಕೆಂಬ ಆಟಕ್ಕೆ ಬಿದ್ದು ಅವರ ಜೀವನವನ್ನು ವೈಯುಕ್ತಿಕವಾಗಿ ಹಾಗೂ ಸಾರ್ವಜನಿಕವಾಗಿ ನೆಮ್ಮದಿ ಇರದಂತೆ ನಾನಾ ರೀತಿಯ ಹಿಂಸೆ ಕೊಡುತ್ತಾ ಅವರನ್ನು ಹೊಂದಲೇ ಬೇಕೆಂಬ ಉತ್ಕಟ ಮನೋಭಾವಕ್ಕೆ ಪಕ್ಕಾಗಿ ತಾವು ಅವರ ನೆಮ್ಮದಿಯನ್ನು ಕಸಿದು ಅವರಿಗೆ ಒಂದು ನೋವಿನ ಅಸಹನೀಯ ಬದುಕನ್ನು ತೋರಿಸುತ್ತಾರೆ,ಒಪ್ಪದೇ ಹೋದಲ್ಲಿ ಅವರಿಗೆ ಸಂಬಂಧಪಟ್ಟವರನ್ನು ಯಾರಿಗೂ ತಿಳಿಯದಂತೆ ಮುಗಿಸುವ ಒಂದು ಪೈಶಾಚಿಕ ಸ್ಥಿತಿಗೆ ತಲುಪಿ ಬಿಡುತ್ತಾರೆ…. ಆದರೆ ಇವರು ಮೋಹಿಸುವ ಆ ವ್ಯಕ್ತಿಯ ಜೀವನವನ್ನು ತಮಗೆ ತಿಳಿಯದೆ ಅಕ್ಷರಶಃ ನರಕವನ್ನಾಗಿ ಮಾಡಿಬಿಟ್ಟಿರುತ್ತಾರೆ.
                              ಅಷ್ಟೇ ಅಲ್ಲ, ಆ ವ್ಯಕ್ತಿಯ ಕೌಟುಂಬಿಕ, ಸಾಮಾಜಿಕ, ವೈಯುಕ್ತಿಕ ಹಾಗೂ ಸಾರ್ವಜನಿಕ ಜೀವನವನ್ನು ಅತ್ಯಂತ ತೊಂದರೆಗೆ ಸಿಲುಕಿಸಿ ತಾವು ಅವರನ್ನು ರಕ್ಷಿಸುತ್ತಿದ್ದೇವೆ, ಪ್ರೀತಿಸುತ್ತಿದ್ದೇವೆ ಮತ್ತು ಅವರು ತನ್ನನ್ನು ತನ್ನಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದಾರೆ ಎಂದು ನಂಬಿ ಅವರಿಗೆ ನೆಮ್ಮದಿ ಎನ್ನುವುದು ಕನಸಾಗಿಸಿ ಬಿಡುತ್ತಾರೆ. ಅವರು ಇವರಿಂದ ದೂರವಾಗಲು ಪ್ರಯತ್ನಿಸಿದಷ್ಟು ಇವರು ಅವರನ್ನು ಹೊಂದಲೇ ಬೇಕೆಂಬ ಹಟಕ್ಕೆ ಬಿದ್ದು ಅವರ ಪ್ರತಿಯೊಂದು ನಡೆಯನ್ನು ಗಮನಿಸುತ್ತಾ ಅವರಿಗೆ ಜೀವನದ ಸವಿಯನ್ನೇ ಕಳೆದು ಸದಾ ಆತಂಕ, ಭಯ, ಸಂಶಯ ಹುಟ್ಟಿಸಿ ಅವರು ತಮ್ಮ ಚಿತ್ತಸ್ವಾಸ್ಯವನ್ನು ಕಳೆದುಕೊಳ್ಳುವಷ್ಟು ಮಟ್ಟಿಗೆ ಅವರನ್ನು ಆವರಿಸಿ ಅವರ ಬದುಕನ್ನು ನರಕ ಸದೃಶ ಮಾಡಿಬಿಡುತ್ತಾರೆ. ಇವರಿಗೆ ಯಾರು ಎಷ್ಟು ತಿಳಿಹೇಳಿದರು, ರೋಗಕ್ಕೆ ಚಿಕಿತ್ಸೆ ನೀಡಿದರು ಅವರನ್ನೆಲ್ಲ ತಮ್ಮ ವೈರಿಗಳೆಂದು ತಿಳಿದು ಅವರಿಗೆ ತಿಳಿಯದಂತೆ ಅವರನ್ನು ಬಹುವಾಗಿ ಕಾಡಿ ಅವರ ಜೀವನವನ್ನು ನರಕ ಮಾಡಿಬಿಡುತ್ತಾರೆ.
                                     ಸಲಿಂಗ ಕಾಮವೆನ್ನುವುದು ಇಂದು ಜಾಗತಿಕ ಮಟ್ಟದಲ್ಲಿ ಒಪ್ಪಿಗೆಯ ಮುದ್ರೆ ಪಡೆದಿದೆಯಾದರೂ ಇದು ಬರಿದೇ ಸಲಿಂಗಕಾಮವಲ್ಲ, ಈ ಕಾಯಿಲೆಯನ್ನು ಹೊಂದಿದವರು ಎಂದು ಒಬ್ಬರೇ ವ್ಯಕ್ತಿಯೊಂದಿಗೆ ತಮ್ಮ ವೈಯುಕ್ತಿಕ ಬದುಕನ್ನು ಸಮೀಕರಿಸಿಕೊಳ್ಳುವುದಿಲ್ಲ….. ಆಗಾಗ ಅಲ್ಲಲ್ಲಿ ತಮಗೆ ಇಷ್ಟವಾದವರು ಕಂಡಾಗ ತಮ್ಮ ನಿಷ್ಠೆಯನ್ನು ಅವ್ಯಾಹತವಾಗಿ ಬದಲಿಸಿಕೊಳ್ಳುತ್ತಿರುತ್ತಾರೆ ಹಾಗೂ ಅದಕ್ಕಾಗಿ ಯಾವುದೇ ಕೆಳಹಂತಕ್ಕೆ ಇಳಿಯಲು ತಯಾರಿರುತ್ತಾರೆ.
                                 ಏನೇ ಆಗಲಿ, ಇಷ್ಟೆಲ್ಲಾ ಮಾಹಿತಿಯ ನಂತರವೂ ಈ ರೋಗಿಗಳನ್ನು ನಮ್ಮ ನಮ್ಮೊಳಗಿದ್ದು, ಗುರುತಿಸುವುದು ಅತ್ಯಂತ ಕಷ್ಟದ ಕೆಲಸ… ನೋಟಕ್ಕೆ ಬರಿದೆ ಸಲಿಂಗಿಗಳಂತೆ ಕಾಣುವ ಇವರು ಎರಟೋಮೇನಿಯ ಎಂಬ ತೀವ್ರತರವಾದ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ ಎಂಬುದು ಗುರುತಿಸುವುದೇ ಬಹು ಪ್ರಯಾಸದ ಕೆಲಸ.
                                    ಎಲ್ಲಕ್ಕಿಂತ ಹೆಚ್ಚಾಗಿ ಈ ಕಾಯಿಲೆಯ ಅತಿ ದೊಡ್ಡ ನಷ್ಟವೆಂದರೆ, ಈ ಕಾಯಿಲೆಗೆ ಇದುವರೆಗೂ ಸಂಪೂರ್ಣವಾಗಿ ಗುಣ ಹೊಂದುವಂತೆ ವೈದ್ಯಕೀಯ ಚಿಕಿತ್ಸೆಯಾಗಲಿ ಅಥವಾ ಔಷಧೋಪಚಾರ ವಾಗಲಿ ಇನ್ನೂ ಅಷ್ಟಾಗಿ ಅಭಿವೃದ್ಧಿ ಹೊಂದಿಲ್ಲ ಎನ್ನುವುದು ಒಂದು ಸಮಾಜದ ಸಮಸ್ಯೆ ಎಂದರೆ ತಪ್ಪಿಲ್ಲ! ಹಾಗೂ ಈ ಕಾಯಿಲೆಗೆ ಇಂತಹದ್ದೇ ಎಂಬ ನಿರ್ದಿಷ್ಟ ಚಿಕಿತ್ಸೆಯಾಗಲಿ ಶಾಶ್ವತ ಪರಿಹಾರವಾಗಲಿ ಇನ್ನೂ ವೈದ್ಯಕೀಯ ಲೋಕದಲ್ಲಿ ಸಾಬೀತಾಗಿಲ್ಲ ಎನ್ನುವುದು ಈ ಕಾಯಿಲೆಯ ಒಂದು ಬಹುದೊಡ್ಡ ನ್ಯೂನತೆ…. ಈ ಕಾಯಿಲೆಯನ್ನು ಸಕಾಲದಲ್ಲಿ ಗುರುತಿಸಿ, ರೋಗಿಗೆ ನೀಡಬೇಕಾದ ಆಪ್ತ ಸಮಾಲೋಚನೆ, ಚಿಕಿತ್ಸಾ ವಿಧಾನ, ಸಮಯ ಎಲ್ಲವನ್ನು ಆರೋಪಿಗೆ ಸಂಬಂಧಪಟ್ಟ ಪೋಷಕರೊಟ್ಟಿಗೆ, ಆಪ್ತರೊಂದಿಗೆ ಚರ್ಚಿಸಿ ಅವರ ಸಾಕಾರದೊಂದಿಗೆ ರೋಗಿಯನ್ನು, ರೋಗಲಕ್ಷಣಗಳನ್ನು ನಿಯಂತ್ರಿಸುವುದಷ್ಟೇ ಸದ್ಯದ ಸಾಧ್ಯತೆ!
ಲತಾ ರಾಜು

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!