oplus_0
Spread the love

ಕಡೂರು: ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಕಡೂರಿಗೆ ಮಂಗಳವಾರ ಸಂಜೆ ಆಗಮಿಸಿದರು.

ಕಡೂರಿಗೆ ಆಗಮಿಸಿದ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು…
.ಕೋಟೆ ಶಾರದಾ ಮಠದ ಬಳಿ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನೆರೆದಿದ್ದ ಸಾವಿರಾರು ಜನರು ಪುಷ್ಪವೃಷ್ಠಿ ಮಾಡಿ ಸ್ವಾಮೀಜಿಯವರ ದರ್ಶನ ಪಡೆದರು‌‌. ಶಾರದಾ ದೇವಿ ಮತ್ತು ಶಂಕರಾಚಾರ್ಯರ ದರ್ಶನ ಪಡೆದ ಸ್ವಾಮೀಜಿಯವರು ಸಭಾಂಗಣಕ್ಕೆ ಆಗಮಿಸಿದ ನಂತರ ಧೂಳಿಪಾದಪೂಜೆ ನಡೆಯಿತು.
ಕಡೂರು ಶೃಂಗೇರಿ ಶಂಕರ ಮಠದ ಆಡಳಿತಾಧಿಕಾರಿ ಬೀರೂರು ಮಂಜುನಾಥ್, ಮಾಜಿ ಶಾಸಕ ವೈ.ಎಸ್‌.ವಿ‌.ದತ್ತ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್ ಮತ್ತಿತರರು ಇದ್ದರು‌

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!