Oplus_131072
Spread the love

ಕಡೂರು: ರೋಟರಿ ಕ್ಲಬ್ ವತಿಯಿಂದ,ಶಿವಮೊಗ್ಗ ರೋಟರಿ ಮಿಡ್ ಟೌನ್ ಚಾರಿಟಿ ಫೌಂಡೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ರಕ್ತದಾನ ಶಿಭಿರ ಏರ್ಪಡಿಸಲಾಗಿತ್ತು.

ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರ ಉದ್ಘಾಟಿಸಿದ ರೋಟರಿ ಅಧ್ಯಕ್ಷ ರಘುರಾಂ, ಮಾತನಾಡಿ, ಸಮಾಜಿಕ ಕಾರ್ಯಗಳಲ್ಲಿ ಸದಾ ಮಂಚೂಣಿಯಲ್ಲಿದೆ. ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಅಗತ್ಯವಿರುವ ರಕ್ತ  ಗಣನೀಯ ಪ್ರಮಾಣದಲ್ಲಿ ಸಂಗ್ರಹವಿರಬೇಕೆಂಬ ಆಶಯ ರೋಟರಿ ಸಂಸ್ಥೆಯದ್ದಾಗಿದ್ದು, ನಿರಂತರವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ ಎಂದರು.
ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಮತ್ತು ಪುರಸಭೆ ಮಾಜಿ ಸದಸ್ಯ ಮರಗುದ್ದಿ ಮನು ಮಾತನಾಡಿ, ರಕ್ತದಾನದಿಂದ ಮತ್ತೊಂದು ಜೀವವನ್ನುಳಿಸುವ ಕಾರ್ಯ ಮಾಡುವ ಅವಕಾಶ ನಮ್ಮದಾಗುತ್ತದೆ. ರಕ್ತದಾನ ಅತ್ಯಂತ ಶ್ರೇಷ್ಠವಾದದು ಎಂದರು.
ಶಿಬಿರ ನಿರ್ದೇಶಕ ಕೆ.ಪಿ.ರಾಘವೇಂದ್ರ ಮಾತನಾಡಿ, ರಕ್ತದಾನ ಪ್ರತಿಯೊಬ್ಬರೂ ಮಾಡಬಹುದಾದಂತಹ ಮಹಾ ದಾನವಾಗಿದೆ.ರೊಟರಿ ಸಂಸ್ಥೆ ನೂರು ಯೂನಿಟ್ ಗಳಿಗೂ ಹೆಚ್ಚು ರಕ್ತ ಸಂಗ್ರಹ ಮಾಡಿದೆಯೆಂಬುದು ಹೆಮ್ಮೆಯ ಸಂಗತಿ.
ಮಾನವೀಯ ಗುಣದ ಪ್ರತೀಕ ರಕ್ತದಾನ ಎಂದರು. ಸುಮಾರು 25 ಯೂನಿಟ್ ರಕ್ತ ಸಂಗ್ರಹವಾಯಿತು.
ರೋಟರಿ ಕಾರ್ಯದರ್ಶಿ ಅಶೋಕ್, ನಿಯೋಜಿತ ಅಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ,
ಡಾ.ಶಿವಪ್ರಕಾಶ್, ಟಿ.ಡಿ‌ರಾಜನ್, ಪುಂಡಲೀಕರಾವ್, ಬಿ.ಶಿವಕುಮಾರ್,
ಕೆ‌.ಜಿ.ಅಣ್ಣಪ್ಪ, ದ್ವಾರಕಾನಾಥ್ ಬಾಬು, ಸವಿತಾ ಸತ್ಯನಾರಾಯಣ್, ಹರೀಶ್ ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!