ಐತಿಹಾಸಿಕ ಸೌಮ್ಯ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಚೌಡಶೋಪಚಾರ ಪೂಜೆ ನೆರವೇರಿತು. ನಂತರ ಮಹಾಮಂಗಳಾರತಿ, ಶಾತ್ತುಮೊರೈ ಸೇವೆಯ ನಂತರ ಮಹಾ ವಿಷ್ಣು ವಿಗ್ರಹವನ್ನು ವೈಕುಂಠ ದ್ವಾರದಲ್ಲಿ ಪ್ರತಿಷ್ಠಾಪಿಸಲಾಯಿತು. ನೂರಾರು ಜನ ಭಕ್ತರು ವೈಕುಂಠ ದ್ವಾರವನ್ನು ಹಾದು ದೇವರ ದರ್ಶನ ಪಡೆದರು. ಬೆಂಗಳೂರಿನ ಪುರೋಹಿತ ವಿದ್ವಾನ್ ವಿನೀತ್ ಸಾರಥಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ದೇವಾಲಯದ ಸಂಸ್ಥಾಪಕರಾದ ಯತಿರಾಜ ರಾಮಾನುಜ, ಯೋಗ ನರಸಿಂಹ, ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಎಂ.ಕೆ.ತಿಮ್ಮಯ್ಯ,ಎ.ಎನ್.ಉಮಾಶಂಕರ್, ಹನುಮಂತಾಭೋವಿ, ಎಂ.ಕೆ.ಸತೀಷ್, ಎಂ.ಎನ್.ಚೆನ್ನಪ್ಪ, ಅನಂತ ನಾರಾಯಣ, ಸಮಿತಿ ಸದಸ್ಯರು ಇದ್ದರು.
ಮಚ್ಚೇರಿಯ ಸೌಮ್ಯ ಯೋಗಾ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ಸ್ಥಾಪಿಸಲಾಗಿತ್ತು.
ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ