Month: December 2025

ಸರ್ಕಾರಿ ನೌಕರರು ಬದ್ದತೆಯಿಂದ ಕಾರ್ಯನಿರ್ವಹಿಸಿ- ಕೆ.ಎಸ್.ಆನಂದ್

ಕಡೂರು: ಜನಪ್ರತಿನಿಧಿಗಳುಮತ್ತು ಸರ್ಕಾರಿ ನೌಕರರು ಸಮನ್ವಯ ಭಾವ ಮತ್ತು ಬದ್ದತೆಯಿಂದ ಕಾರ್ಯ ನಿರ್ವಹಿಸಿದರೆ ಸರ್ಕಾರದ ಬಗ್ಗೆ ಸಾರ್ವಜನಿಕವಾಗಿ ಸದಭಿಪ್ರಾಯ ಮೂಡಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು‌. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಡೂರು ತಾಲ್ಲೂಕು ಘಟಕ ಮಲ್ಲೇಶ್ವರದ ಸ್ವರ್ಣಾಂಬ…

ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ

ಕಡೂರು: 2024-25 ನೇ ಸಾಲಿನಲ್ಲಿ ಶೇ90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಪುರಸ್ಕರಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ಮಂಜುನಾಥ್ ಹೇಳಿದರು. ಬುಧವಾರ ಈ ಕುರಿತು ಮಾತನಾಡಿದ ಅವರು, 24-25 ನೇ ಸಾಲಿನ…

ಫಲಿತಾಂಶ ಉತ್ತಮವಾಗಿಸುವ ಗುರಿ ಶಿಕ್ಷಕರದ್ದಾಗಿರಲಿ- ಬಿ.ಇ.ಓ ತಿಮ್ಮಯ್ಯ

ಕಡೂರು: ಮುಂಬರಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡೂರು ಶೈಕ್ಷಣಿಕ ವಲಯ ಅತ್ಯುತ್ತಮ ಫಲಿತಾಂಶ ನೀಡಬೇಕೆಂಬ ನಿಟ್ಟಿನಲ್ಲಿ ಪ್ರತಿ ಶಿಕ್ಷಕರೂ ಗುರಿ ಸಾಧಿಸಲು ಶ್ರಮ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ‌ಎಚ್.ತಿಮ್ಮಯ್ಯ ಹೇಳಿದರು. ಕಡೂರಿನ ಬಿಜಿಎಸ್ ಶಾಲೆಯಲ್ಲಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯಲು…

ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿ- ಕೆ.ಎಸ್.ಆನಂದ್

ಕಡೂರು : ಮಕ್ಕಳನ್ನು ಹೆಚ್ಚು ಅಂಕಗಳಿಸಲು ಒತ್ತಡ ಹಾಕದೆ ಅವರ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರ ಅಭ್ಯುದಯಕ್ಕೆ ಭಧ್ರ ಬುನಾದಿಯಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ತಾಲ್ಲೂಕಿನ ಗಿರಿಯಾಪುರ ಗ್ರಾಮದಲ್ಲಿ ಶನಿವಾರ ಶಿಕ್ಷಣ ಇಲಾಖೆ ಹಾಗೂ ಗುರುಕೃಪ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ…

ಸಖರಾಯಪಟ್ಟಣ- ಗ್ರಾಮಪಂಚಾಯಿತಿ ಸದಸ್ಯನ ಹತ್ಯೆ

ಹತ್ಯೆಯಾದ ಗಣೇಶ್ ಗೌಡ ಕಡೂರು: ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಗೌಡ(38) ಹತ್ಯೆಯಾಗಿದ್ದಾರೆ. ಶುಕ್ರವಾರ ರಾತ್ರಿ 10-30 ಸುಮಾರಿಗೆ ಸಖರಾಯಪಟ್ಟಣದ ಕಲ್ಮರುಡೇಶ್ವರ ಮಠದ ಸಮೀಪ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.…

ಕಠಿಣ ಪರಿಶ್ರದಿಂದ ಉನ್ನತ ವ್ಯಕ್ತಿತ್ವ- ಸ್ಥಾನ ಪಡೆಯಲು ಸಾಧ್ಯ- ಕೆ.ಎಸ್.ಆನಂದ್

ಕಡೂರು: ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ವ್ಯಕ್ತಿತ್ವ ಮತ್ತು ಸ್ಥಾನಮಾನ ಪಡೆಯಲು ಸಾಧ್ಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಶುಕ್ರವಾರ ಕಡೂರಿನ ಹೊರವಲಯದ ಪ್ರಜ್ಞಾ ಸೆಂಟ್ರಲ್ ಶಾಲೆಯ ಪ್ರಜ್ಞಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀವನಕ್ಕಾಗಿ ಶಿಕ್ಷಣ ಬಹುಮುಖ್ಯ. ಅದರ…

ಲಲಿತಮ್ಮ ಡಿ.ಸಿ.ಶ್ರೀಕಂಠಪ್ಪ ನಿಧನ

ಬೀರೂರು: ಮಾಜಿ ಸಂಸದ ದಿವಂಗತ ಡಿ.ಸಿ.ಶ್ರೀಕಂಠಪ್ಪನವರ ಪತ್ನಿ ಲಲಿತಮ್ಮಶ್ರೀಕಂಠಪ್ಪ (90ವರ್ಷ) ವಯೋಸಹಜವಾಗಿ ಮಂಗಳವಾರ ನಿಧನರಾದರು. ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ 12.00 ಗಂಟೆಗೆ ಕೋಡಿಹಳ್ಳಿ ರಸ್ತೆಯ ದೊಡ್ಡಮನೆ ಮುಕ್ತಿ ಧಾಮದಲ್ಲಿ ನೆರೆವೇರಿಸಲಾಗುವುದು…

ಮಚ್ಚೇರಿಯಲ್ಲಿ ಹನುಮಜಯಂತಿ

ಕಡೂರು: ತಾಲ್ಲೂಕಿನ ಮಚ್ಚೇರಿಯ ಐತಿಹಾಸಿಕ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಚ್ಚೇರಿಯ ದಿ.ಎ.ಎಲ್.ನಾಗರಾಜಶಾಸ್ತ್ರಿ ಕುಟುಂಬ ವರ್ಗದವರು 34 ನೇ ವರ್ಷದ ಹನುಮಜಯಂತಿ ಪ್ರಯುಕ್ತ ಪವಮಾನ ಹೋಮ ನೆರವೇರಿಸಿದರು. ಸ್ವಾಮಿಯ ಮೂಲ ಸ್ಥಾನದಲ್ಲಿ ಅಭಿಷೇಕ, ಗಣಪತಿ ಪೂಜೆ, ಪವಮಾನ ಹೋಮ, ಪೂರ್ಣಾಹುತಿ, ಅಲಂಕಾರ,ಮಹಾಮಂಗಳಾರತಿ, ತೀರ್ಥ ಪ್ರಸಾದ…

ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ- ನ್ಯಾಯಾಧೀಶ ಇರ್ಫಾನ್

ಕಡೂರು : ಯುವಸಮೂಹ ಲೈಂಗಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಥಾ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,…

ಜ್ಞಾನ ದೊರಕಿಸುವುದು ಶಿಕ್ಷಣದ ಮೂಲ ಉದ್ದೇಶ- ಕೆ.ಎಸ್.ಆನಂದ್

ಕಡೂರು : ಸ್ಪರ್ದಾತ್ಮಕ ಜಗತ್ತಿನಲ್ಲಿ ಪ್ರತಿ ವಿಷಯದಲ್ಲೂ ಜ್ಞಾನ ದೊರಕಿಸಿಕೊಡುವುದು ಶಿಕ್ಷಣದ ಮೂಲ ಉದ್ದೇಶ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ತಾಲ್ಲೂಕಿನ ಕಲ್ಲಾಪುರ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಉರ್ದು ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯನ್ನು…

error: Content is protected !!