ಕಡೂರು : ಮಕ್ಕಳನ್ನು ಹೆಚ್ಚು ಅಂಕಗಳಿಸಲು ಒತ್ತಡ ಹಾಕದೆ ಅವರ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರ ಅಭ್ಯುದಯಕ್ಕೆ ಭಧ್ರ ಬುನಾದಿಯಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲ್ಲೂಕಿನ ಗಿರಿಯಾಪುರ ಗ್ರಾಮದಲ್ಲಿ ಶನಿವಾರ ಶಿಕ್ಷಣ ಇಲಾಖೆ ಹಾಗೂ ಗುರುಕೃಪ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರಕಾಶನಗೊಳಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ.
ಕೆಲವೇ ದಿನಗಳಲ್ಲಿ ಹತ್ತನೇ ತರಗತಿ ಪರೀಕ್ಷೆಗಳು ಆರಂಭವಾಗಲಿವೆ. ಕಳೆದ ಸಾಲಿನಲ್ಲಿ ಕಡೂರು ಶೈಕ್ಷಣಿಕ ವಲಯದಲ್ಲಿ ಕುಸಿತವಾಗಿದ್ದ ಫಲಿತಾಂಶವನ್ನು ಈ ಬಾರಿ ಏರಿಕೆಯಾಗಲು ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.ತಾಲ್ಲೂಕಿನ ಗಿರಿಯಾಪುರ ಗ್ರಾಮದಲ್ಲಿ 1962 ರಲ್ಲಿ ತಾಲ್ಲೂಕಿಗೆ ಎರಡನೇ ಪೌಢಶಾಲೆ ಪ್ರಾರಂಭವಾಗಿ ಶೈಕ್ಷಣಿಕ ಗ್ರಾಮವೆಂಬ ಖ್ಯಾತಿ ಪಡೆದಿದೆ. ಶಿಕ್ಷಣದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡಲಿ ಎಂದು ಹಾರೈಸಿದರು.
ಡಿಡಿಪಿಐ ತಿಮ್ಮರಾಜು ಮಾತನಾಡಿ,ಸರಕಾರ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ದಿಸಿಕೊಳ್ಳಲು ಶಿಕ್ಷಕರು ಹೆಚ್ಚು ಒತ್ತುಕೊಡಬೇಕಿದೆ ಎಂದರು. ಗುರುಕೃಪ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಸ್.ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡೂರು ಬಿಇಓ ಎಂ.ಎಚ್. ತಿಮ್ಮಯ್ಯ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್,ಗುರುಕೃಪ ಶಾಲೆ ಆಡಳಿತ ಮಂಡಳಿ ಉಪಾಧ್ಯಕ್ಷ ಜಿ.ಪಿ.ಪ್ರಭುಕುಮಾರ್, ಕಾರ್ಯದರ್ಶಿ ಸದಾಶಿವಪ್ಪ, ಜಿ.ಆರ್. ಶಿವಕುಮಾರ್, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಗದೀಶ್, ಭೈರೇಗೌಡ, ಸತ್ಯನಾರಯಣ್, ಕಿರಣ್‌ಕುಮಾರ್, ಚಂದ್ರಪ್ಪ, ಪರಮೇಶ್, ರಾಜಕುಮಾರ್, ಬಿಸಿಯೂಟ ಸಹಾಯಕ ನಿರ್ದೇಶಕ ದೇವರಾಜ್, ಅಣ್ಣನಾಯ್ಕ, ಶಿಕ್ಷಣ ಸಂಯೋಜಕ ಕೆ.ಡಿ.ನಾಗರಾಜ್, ಜಿ.ಎಂ. ಯತೀಶ್, ಮುರುಳಿಧರ್, ಅಜ್ಜಯ್ಯ, ಚಿತ್ರಾ, ಮುನಾವರ್ ಪಾಷಾ, ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್ ಇದ್ದರು.ಈ ಸಂದರ್ಭದಲ್ಲಿ ಜಿಲ್ಲೆಯ 8 ಶೈಕ್ಷಣಿಕ ವಲಯದಿಂದ 800 ಕ್ಕೂ ಹೆಚ್ಚು ಮಕ್ಕಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮತ್ತಿತರಿದ್ದರು.


