ಕೆಳಮಟ್ಟದಲ್ಲಿ ವಿದ್ಯುತ್ ತಂತಿ- ಆತಂಕ
ಕಡೂರಿನ ಗ್ರಾಮಾಂತರ ಭಾಗದ ಯಾವುದೇ ರಸ್ತೆಗೆ ಹೋದರು ಬದಿಯಲ್ಲಿ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಹೈ ಟೆನ್ಶನ್ ತಂತಿಗಳು ತೀರ ಕೆಳಮಟ್ಟದಲ್ಲಿ ಇದ್ದು ಅಪಾಯಕ್ಕೆ ಎಡೆ ಮಾಡುವಂತಿದ್ದರೂ ಮೆಸ್ಕಾಂ ಅದರತ್ತ ಗಮನಹರಿಸದಿರುವುದು ಆತಂಕಕಾರಿಯಾಗಿದೆ. ಕಡೂರು ಪಟ್ಟಣದಿಂದ ಕೇವಲ ಎರಡು ಕಿಲೋಮೀಟರ್ ದೂರವಿರುವ ಮಲ್ಲೇಶ್ವರ…
ಕಡೂರು-ಉತ್ತಮ ಮಳೆ-ಕೆಲ ಮನೆಗಳಿಗೆ ಹಾನಿ
ಕಡೂರು ತಾಲ್ಲೂಕಿನಾದ್ಯಂತ ಮಂಗಳವಾರ ಉತ್ತಮವಾಗಿ ಮಳೆಯಾಗಿದೆ. ಕಸಬಾ 29 ಮಿ.ಮೀ., ಬೀರೂರು(19), ಬಾಸೂರು( 87.0), ಸಖರಾಯಪಟ್ಟಣ(20), ಸಿಂಗಟಗೆರೆ(21.2),ಎಮ್ಮೆದೊಡ್ಡಿ(16.0), ಯಗಟಿ(39.6), ಪಂಚನಹಳ್ಳಿ( 25.0), ಗಿರಿಯಾಪುರ(60.0) ಮಳೆಯಾಗಿದೆ. ಮಳೆಯಿಂದ ಹೆಚ್ಚಿನ ಅನಾಹುತವಾಗಿಲ್ಲವಾದರೂ ತಾಲ್ಲೂಕಿನ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಕಸಬಾ ಹೋಬಳಿಯಲ್ಲಿ 9 ಮತ್ತು ಸಖರಾಯಪಟ್ಟಣ…
ನಿರ್ಲಕ್ಷ್ಯಕ್ಕೊಳಗಾದ ಹಿರಿಯಂಗಳ ದೇವಸ್ಥಾನ
ಕಡೂರು ತಾಲ್ಲೂಕಿನ ಹಿರಿಯಂಗಳ ಗ್ರಾಮದಲ್ಲಿ ಹೊಯ್ಸಳರು ನಿರ್ಮಿಸಿರುವ ಲಕ್ಷ್ಮಿಭೋಗ ಕೇಶವ ಮತ್ತು ಈಶ್ವರ ದೇವಸ್ಥಾನಗಳಿವೆ. ಎರಡೂ ದೇವಸ್ಥಾನಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದು ನಮ್ಮ ನಿರಭಿಮಾನಕ್ಕೆ ಸಾಕ್ಷಿಯಾಗಿದೆ. ಲಕ್ಷ್ಮೀಭೋಗ ಕೇಶವ ದೇವಸ್ಥಾನ ಹೊಯ್ಸಳ ಶೈಲಿಯಲ್ಲಿದ್ದರೂ ಕಲಾದೃಷ್ಟಿಯಿಂದ ವಿಶೇಷ ಕೆತ್ತನೆಗಳಿಲ್ಲ. ಆದರೆ, ವಾಸ್ತು ಶೈಲಿಯಲ್ಲಿ ಮೇರು…
ಹೆಚ್ಚುವರಿ ಆರೋಗ್ಯಾಧಿಕಾರಿ ಕಚೇರಿ ಕೊಠಡಿ ಉದ್ಘಾಟನೆ
ಕಡೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಹೆಚ್ಚುವರಿ ಕಟ್ಟಡವನ್ನು ಶಾಸಕ ಕೆ.ಎಸ್.ಆನಂದ್ ಸೋಮವಾರ ಉದ್ಘಾಟಿಸಿದರು. ಕಡೂರು ವಿಸ್ತಾರವಾಗಿದ್ದು, ಆರೋಗ್ಯಾಧಿಕಾರಿಗಳ ಕಚೇರಿ ಚಿಕ್ಕದಾಗಿರುವುದು ತೊಂದರೆಯಾಗಿತ್ತು. 15 ಲಕ್ಷ ವೆಚ್ಚದಲ್ಲಿ ಆರೋಗ್ಯಾಧಿಕಾರಿಗಳ ಹೆಚ್ಚುವರಿ ಕೊಠಡಿ ನಿರ್ಮಾಣವಾಗಿದೆ. ಆರೋಗ್ಯಾಧಿಕಾರಿ ಕಚೇರಿ ಆಡಳಿತ ಸುಗಮಗೊಳ್ಳಲು…
ಸಮಸ್ಯೆಗಳ ಪರಿಹಾರಕ್ಕಾಗಿಪೂರಕ ಕ್ರಿಯಾ ಯೋಜನೆ-ಎಂ.ಪ್ರಕಾಶ್ ನಾಯ್ಕ
ಕಡೂರು: ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಚಿಂತನೆ ನಡೆಸಿ ಪೂರಕ ಕ್ರಿಯಾ ಯೋಜನೆ ಸಿದ್ದಗೊಳಿಸಲಾಗುತ್ತಿದೆ ಎಂದು ಚಿಕ್ಕಂಗಳ ಗ್ರಾಮಪಂಚಾಯಿತಿ ಅಧ್ಯಕ್ಷ ಎಂ.ಪ್ರಕಾಶ್ ನಾಯ್ಕ ಹೇಳಿದರು. ತಾಲ್ಲೂಕಿನ ಚಿಕ್ಕಂಗಳದಲ್ಲಿ ಸೋಮವಾರ ನಡೆದ ಗ್ರಾಮಪಂಚಾಯಿತಿ ಅಭಿವೃದ್ಧಿ ಮುನ್ನೋಟ ಮತ್ತು ತೀವ್ರ ಸಹಭಾಗಿತ್ವ ಯೋಜನೆ…
ಸರ್ಕಾರಿ ಆಸ್ಪತ್ರೆಗೆ ತೆರಳಲು ಯಾವುದೇ ಕೀಳರಿಮೆ ಬೇಡ-ಕೆ.ಎಸ್.ಆನಂದ್
ಕಡೂರು: ಸರ್ಕಾರಿ ಆಸ್ಪತ್ರೆಗೆ ತೆರಳಲು ಯಾವುದೇ ಕೀಳರಿಮೆ ಬೇಡ- ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯುವಷ್ಟೆ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಯಲ್ಲೂ ದೊರೆಯುತ್ತಿರುವುದು ವಾಸ್ತವಿಕ ಸಂಗತಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಪಟ್ಟಣದ ಸುಭಾಷ್ ನಗರದಲ್ಲಿ ಸೋಮವಾರ ನಮ್ಮ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ…
ಸಮಾಜಮುಖಿ ಪದಕ್ಕೆ ಪರ್ಯಾಯ
ಒಂದು ಧಾರ್ಮಿಕ ಸಂಸ್ಥೆ ಸಾಮಾಜಿಕವಾಗಿ ಏನೆಲ್ಲ ಮಾಡಬಹುದು….ಹೇಗೆಲ್ಲ ಪರಿವರ್ತನೆ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ ಮೇಲುಕೋಟೆ ಯದುಗಿರಿ ಯತಿರಾಜ ಮಠ. ನಿರಂತರ ಕ್ರಿಯಾಶೀಲತೆಯಿಂದ ಸಾಮಾಜಿಕ ಬದಲಾವಣೆಯ ಪರ್ವವನ್ನೆ ಆರಂಭಿಸಿರುವ ಯತಿರಾಜಮಠ ಸದ್ದಿಲ್ಲದೆ ಸಮಾಜ ಸೇವೆಯನ್ನು ತನ್ನುಸಿರನ್ನಾಗಿಸಿಕೊಂಡಿದೆ. ಸಮಾಜಮುಖಿ ಎಂಬುದಕ್ಕೆ ಅನ್ವರ್ಥವಾಗಿದೆ. ಪ್ರಸ್ತುತ…
ಬದಲಾಗಿದೆ ಕಡೂರು…
ಕಡೂರನ್ನು ನಾನು ಮೊದಲು ನೋಡಿದ್ದು ಐದನೇ ಕ್ಲಾಸಿಗೆ ಅಂದಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದಾಗ. ಆಗ ಕಡೂರೆಂಬುದು ನನಗೆ ಅದ್ಭುತ ಲೋಕ..ದಿನಾ ಬೆಳಗೆದ್ದು ಕಡೂರಿಗೆ ಬಸ್ಸಿನಲ್ಲಿ 9 ಗಂಟೆ ಗೆ ಹೊರಟರೆ ಸಂಜೆ 4-30 ಗೆ ಸ್ಕೂಲ್ ಬಿಟ್ಟಾಗ ಕೆಎಲ್ವಿ…
ಅಂಧ ವೈದ್ಯ ಡಾ.ವೈ.ಜಿಪರಮೇಶ್ವರ
ವಿಶ್ವದಲ್ಲಿ ಇದ್ದ ಇಬ್ಬರು ಅಂಧ ವೈದ್ಯರಲ್ಲಿ ಒಬ್ಬರು . ಮತ್ತೊಬ್ಬರು ನನ್ನ ಕಡೂರು ತಾಲ್ಲೂಕಿನವರು. ಅಚ್ಚರಿಯಾಯಿತೆ? ಹೌದು. ಡಾ.ವೈ.ಜಿ.ಪರಮೇಶ್ವರ. ಭಾರತದ ಮೊದಲ ಹಾಗೂ ಕೊನೆಯ(ಬಹುಶಃ) ಅಂಧ ವೈದ್ಯರು! ಅವರು ಹುಟ್ಡಿದ್ದು ಕಡೂರು ತಾಲ್ಲೂಕಿನ ಯಲ್ಲಂಬಳಸೆಯಲ್ಲಿ. ಯಲ್ಲಂಬಳಸೆ ಒಂದು ಪುಣ್ಯಭೂಮಿ. ಇಲ್ಲಿ ಜನಿಸಿದ…
