Oplus_16908288
Spread the love
ವಿಶ್ವದಲ್ಲಿ ಇದ್ದ ಇಬ್ಬರು ಅಂಧ ವೈದ್ಯರಲ್ಲಿ ಒಬ್ಬರು . ಮತ್ತೊಬ್ಬರು ನನ್ನ ಕಡೂರು ತಾಲ್ಲೂಕಿನವರು. ಅಚ್ಚರಿಯಾಯಿತೆ? ಹೌದು. ಡಾ.ವೈ.ಜಿ.ಪರಮೇಶ್ವರ. ಭಾರತದ ಮೊದಲ ಹಾಗೂ ಕೊನೆಯ(ಬಹುಶಃ) ಅಂಧ ವೈದ್ಯರು! ಅವರು ಹುಟ್ಡಿದ್ದು ಕಡೂರು ತಾಲ್ಲೂಕಿನ ಯಲ್ಲಂಬಳಸೆಯಲ್ಲಿ.
ಯಲ್ಲಂಬಳಸೆ ಒಂದು‌ ಪುಣ್ಯಭೂಮಿ. ಇಲ್ಲಿ ಜನಿಸಿದ ಸಚ್ಚಿದಾನಂದೇದ್ರ ಸರಸ್ವತಿ ಮಹಾಸ್ವಾಮಿಗಳು ಹೊಳೇನರಸೀಪುರದ ಆಧ್ಯಾತ್ಮ ಪ್ರಕಾಶನ ಕೇಂದ್ರದ ಸ್ಥಾಪಕರು.ಶಂಕರತತ್ವವನ್ನು ವಿಶ್ವವ್ಯಾಪಿಯನ್ನಾಗಿಸಿದವರು. ಈ ಗ್ರಾಮದಲ್ಲೆ ಹುಟ್ಟಿದವರು ನಮ್ಮ ಡಾಕ್ಟ್ರು.
ಡಾ.ವೈ.ಜಿ‌ಪರಮೇಶ್ವರ ಅವರು
 1977ರಲ್ಲಿ  ಕರ್ನಾಟಕ ವಿ.ವಿ.ಯಲ್ಲಿ ಎಂಬಿಬಿಎಸ್ ಮುಗಿಸಿ ವೈದ್ಯಕೀಯ ವೃತ್ತಿ ಆರಂಭಿಸಿದರು. 1979 ರಲ್ಲಿ, ಅವರು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ಅಧಿಕಾರಿ ಮತ್ತು ಸಹಾಯಕ ಶಸ್ತ್ರಚಿಕಿತ್ಸಕರಾಗಿ ನೇಮಕಗೊಂಡರು . ಬೆಂಗಳೂರಿನ ರೋಗಶಾಸ್ತ್ರ ವಸ್ತುಸಂಗ್ರಹಾಲಯದ ಮೇಲ್ವಿಚಾರಕರಾಗಿಯೂ ಅವರನ್ನು ನೇಮಿಸಲಾಯಿತು .  ನಂತರ ಅವರು ಅಧ್ಯಾಪಕ ವೃತ್ತಿಗೆ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದರು ಮತ್ತು 1980 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಫಾರ್ಮಕಾಲಜಿಯಲ್ಲಿ ಉಪನ್ಯಾಸಕರಾಗಿದ್ದರು ಎಂಬ ವಿವರವಷ್ಟೆ ದೊರೆಯುತ್ತದೆ.
———————
ಈ ಮಹನೀಯರ ಬಗ್ಗೆ ಹೆಚ್ಚು ವಿವರಗಳು ದೊರೆತಿಲ್ಲ. ಆದರೆ ಡಾ.ವೈ.ಜಿ‌.ಪರಮೇಶ್ವರ ಅವರ ಬಗ್ಗೆ ಹಿಂದೆ ಪ್ರಜಾವಾಣಿಯಲ್ಲಿ ನಾನೊಂದು ಲೇಖನ ಬರೆದಿದ್ದೆ. ಅದನ್ನು ಕಂಡ ಡಾಕ್ಟರ ಪತ್ನಿ ಪ್ರೇಮಾ ಅವರು ಅವರ ಮಗ ಪ್ರವರ್ಧನ್ ಜೊತೆ ನನ್ನ ಮನೆಗೇ ಬಂದು ಕೆಲ ಸಮಯ ಮಾತನಾಡಿ ಲೇಖನದ ಬಗ್ಗೆ ಅಭಿಮಾನಿಸಿ ಮಾತನಾಡಿದ್ದರು. ಬಹುಶಃ ಈಗವರು ಬೆಂಗಳೂರಿನಲ್ಲಿರಬೇಕು…. ಡಾಕ್ಟ್ರ ಮನೆ ಈಗಲೂ ಯಲ್ಲಂಬಳಸೆಯಲ್ಲಿದೆ.
ಯಾಕೋ ಪರಮೇಶ್ವರ ಅವರನ್ನು ಮರೆತಿರುವುದು ಬೇಸರವೆನಿಸಿತು.

Oplus_16908288

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!