ನೂತನ ಸೀತಾರಾಮಕಲ್ಯಾಣ ಮಂಂಟಪ
ಕಡೂರು: ತಾಲ್ಲೂಕಿನ ಮಚ್ಚೇರಿ ಬಳಿಯ ಕುಂತೀಹೊಳೆ( ಶಂಖತೀರ್ಥ) ಕಲ್ಯಾಣ ರಾಮ ದೇವಸ್ಥಾನ ಆಡಳಿತ ಸಮಿತಿ ನೂತನವಾಗಿ ನಿರ್ಮಿಸಿರುವ ಸೀತಾರಾಮ ಕಲ್ಯಾಣ ಮಂಟಪದ ಪ್ರವೇಶೋತ್ಸವ ಬುಧವಾರ ಬ್ರಾಹ್ಮೀ ಮಹೂರ್ತದಲ್ಲಿ ನೆರವೇರಿತು.
ಮಂಗಳವಾರ ರಾತ್ರಿ ತತ್ಸಂಬಂಧಿ ಹೋಮ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ಪುರೋಹಿತ ದೇವೀಪ್ರಸಾದ್ ಶರ್ಮ ಮತ್ತು ತಂಡದವರು ನೆರವೇರಿಸಿದರು. ಬುಧವಾರ ಮಲ್ಲೇಶ್ವರ ಸ್ವರ್ಣಾಂಬ ದೇವಿ ಮತ್ತು ಮಲ್ಲಿದೇವಿಹಳ್ಳಿ ಆಂಜನೇಯ ದೇವರುಗಳ ಉಪಸ್ಥಿತಿಯಲ್ಲಿ ಪ್ರವೇಶೋತ್ಸವ ನಡೆಸಲಾಯಿತು.
ಆಡಳಿತ ಸಮಿತಿ ಗೌರವಾಧ್ಯಕ್ಷ ಎಂ.ಕೆ.ತಿಮ್ಮಯ್ಯ, ಅಧ್ಯಕ್ಷ ಎಚ್.ಎಲ್.ಲೋಕೇಶ್,ಕೋಶಾಧ್ಯಕ್ಷ ಎಂ.ಎಸ್.ಉಮಾಶಂಕರ್, ಪ್ರಧಾನ ಕಾರ್ಯದರ್ಶಿ ಎಸ್.ಡಿ.ಸುರೇಶ್, ಎಸ್.ಬಿ.ಕಲ್ಲೇಶಪ್ಪ, ಎಂ.ಡಿ.ರಂಗಯ್ಯ ಮತ್ತಿತರರು ಇದ್ದರು.
ಕಲ್ಯಾಣ ರಾಮ