Spread the love

 

 


ಕಡೂರು : ಪಟ್ಟಣವು ಅಭಿವೃದ್ದಿ ಹೊಂದಲು ಭಂಡಾರಿಶ್ರೀನಿವಾಸ್ ಕೊಡುಗೆ ಅಪಾರವಾಗಿದೆ ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ತಿಪ್ಪೇಶ್ ಬಣ್ಣಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅವರ 59ನೇ ಹುಟ್ಟು ಹಬ್ಬ ಆಚರಣೆ ಅಂಗವಾಗಿ ಆಸ್ಪತ್ರೆಯ ಒಳರೋಗಿಗಳಿಗೆ ಅಭಿಮಾನಿ ಬಳಗದ ವತಿಯಿಂದ ಹಣ್ಣು-ಬ್ರೆಡ್‌ಗಳನ್ನು ವಿತರಿಸಿ ಮಾತನಾಡಿ, ಸತತ ನಾಲ್ಕು ಬಾರಿ ಪುರಸಭೆ ಅಧ್ಯಕ್ಷರಾಗಿದ್ದು ಇತಿಹಾಸದ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅವರ ಅವಧಿಯಲ್ಲಿ ಪಟ್ಟಣದಲ್ಲಿನ ಸ್ವಚ್ಚತೆ ಹಾಗೂ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳು ನಾಗರೀಕರ ಮನ್ನಣೆಗಳಿಸಿರುವುದು ಶ್ಲಾಘನೀಯ ಎಂದರು.
ಪುರಸಭಾ ಮಾಜಿ ಸದಸ್ಯ ಮರುಗುದ್ದಿ ಮನು ಮಾತನಾಡಿ, ಪುರಸಭಾ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ವೇದಾಪಾರ್ಕ್ ನಿರ್ಮಾಣ, ಹಿಂದೂ ರುದ್ರಭೂಮಿಗೆ ಹೊಸ ರೂಪ ನೀಡಿರುವುದರ ಜೊತೆಗೆ ಕೆಎಲ್‌ವಿ ವೃತ್ತದಲ್ಲಿ ನೀರಿನ ಕಾರಂಜಿಯೊಂದಿಗೆ ಕಡೂರು ಪಟ್ಟಣವನ್ನು ಗತವೈಭವಕ್ಕೆ ಮರಳಿಸಿದ್ದು ಕಡೂರಿಗೆ ಹೆಮ್ಮೆಯ ಸಂಗತಿ. ಅವರ ಅಭಿವೃದ್ದಿ ಕಾರ್ಯಗಳ ದೂರದೃಷ್ಟಿಯ ಚಿಂತನೆಗಳು ಕಡೂರಿಗೆ ಮತ್ತಷ್ಟು ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯರಾದ ಸೈಯ್ಯದ್ ಯಾಸೀನ್, ಗೋವಿಂದರಾಜು, ಮುಖಂಡರಾದ ಕದಂಬವೆಂಕಟೇಶ್, ಡಿಶ್ ಮಂಜುನಾಥ್, ನಾಗರಾಜ್, ಶಂಕರ್, ಕಾಂತರಾಜ್, ಕಂಸಾಗರ ಶೇಖರ್, ವಿನಯ್ ದಂಡಾವತಿ, ರಮೇಶ್ ಕಂಸಾಗರ ರೇವಣ್ಣ, ಡಾ. ಚಂದಾ, ಸರಸ್ವತಿ, ಆಸ್ಪತ್ರೆಯ ಅಧೀಕ್ಷಕ ಚಂದ್ರೇಗೌಡ, ಯೋಗೀಶ್, ರಾಜು ಮತ್ತಿತರಿದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!