Oplus_131072
Spread the love

ಕಡೂರು: ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ವೇದಾನಂದ ಪ್ರಭು ಪಿ ಜಿ ಅವರಿಗೆ “ಇನ್ವೆಸ್ಟ್ ಮೆಂಟ್ ಬಿಹೇವಿಯರ್ ಅಂಡ್ ಟ್ಯಾಕ್ಸ್ ಪ್ಲಾನಿಂಗ್ ಬೈ ಸ್ಯಾಲರೀಡ್ ವುಮೆನ್ ಅಸೆಸೀಸ್ ಇನ್ ಕರ್ನಾಟಕ” ಎ ಸ್ಟಡಿ(Investment Behaviour and Tax Planning By Salaried Women Assessees in Karnataka-A study)
ಎಂಬ ಸಂಶೋಧನ ಪ್ರಬಂದಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ.ಪದವಿ ನೀಡಿದೆ.
ವೇದಾನಂದ ಪ್ರಭು ಪಿ ಜಿ ಅವರು ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಡಾ. ಬಿ ಎ ಕರುಣಾಕರ ರೆಡ್ಡಿ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪುಟ್ಟಯ್ಯನ ಅಗ್ರಹಾರ ಗ್ರಾಮದ ಜಯಮ್ಮ ಮತ್ತು ಲೇಟ್ ಗೋವಿಂದರಾಜು ಅವರ ಪುತ್ರರಾದ ವೇದಾನಂದ ಪ್ರಭು ಪಿ ಜಿ ಅವರ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕ ವರ್ಗವರು ಅಭಿನಂದಿಸಿದ್ದಾರೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!