ಕಡೂರು ತಾಲ್ಲೂಕಿನ ಕುಗ್ರಾಮ ಮಚ್ಚೇರಿ. ಇಲ್ಲಿ ಹುಟ್ಟಿ ಬೆಳೆದ ದಿ.ಎಂ.ಎಸ್.ಶ್ರೀನಿವಾಸ ಮೂರ್ತಿಯವರು ಶಿಕ್ಷಣ ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿದರು. ಅವರು ಇಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಅವರ ಎರಡನೇ ಮಗ ಕೇಶವನ್ ಹುಟ್ಟಿದ್ದು ಇದೇ ಕುಗ್ರಾಮ ಮಚ್ಚೇರಿಯಲ್ಲಿ. ಕೇಶವನ್ ಗೆ ಇಂಜಿನಿಯರ್ ಆಗಬೇಕೆಂಬಾಸೆ. ತಂದೆಗೆ ಈತ ಡಾಕ್ಟರ್ ಅಗಬೇಕೆಂಬಾಸೆ, ಕಡೆಗೆ ತಂದೆಯ ಮಾತು ನಡೆಯಿತು. ಇಂಜಿನಿಯರಿಂಗ್ ಕ್ಷೇತ್ರಕ್ಕಾದ ನಷ್ಟ ವೈದ್ಯಕೀಯ ಕ್ಷೇತ್ರಕ್ಕಾಯಿತು. ಕೇಶವನ್ ಇಂದು ವಿಶ್ವವಿಖ್ಯಾತ ಮನೋವೈದ್ಯಕೀಯ ತಜ್ಞರು.

ಮೈಸೂರು ಮೆಡಿಕಲ್ ಕಾಲೇಜಿಬಲ್ಲಿ ಎಂ.ಬಿ.ಬಿ.ಎಸ್. ನಂತರ ಬೆಂಗಳೂರಿನ ನಿಮ್ಹ್ಯಾನ್ಸ್ ನಲ್ಲಿ ಎಂ.ಡಿ. ಆಮೇಲೆ ಹೋಗಿದ್ದು ಅಮೇರಿಕಾಗೆ. ಅಲ್ಲಿ ಎಫ್ ಆರ್ ಸಿ ಎಸ್ ಪದವಿ. ಮನೋವೈದ್ಯಕೀಯ ತಜ್ಞನಾಗಿ ಇವರ ಸಾಧನೆಗೆ ಮೂರು ಬಾರಿ ಗೋಲ್ಡನ್ ಆಪಲ್ ಪ್ರಶಸ್ತಿ ದೊರೆತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಟಿತ ಅಂತರ್ರಾಷ್ಟ್ರೀಯ ಗ್ಯಾಸ್ಕೆಲ್ ಪ್ರಶಸ್ತಿ ಪಡೆದ  ಅಮೆರಿಕನ್ ಅಲ್ಲದ ಮೊದಲಿಗ.ಮೊದಲ ಭಾರತೀಯ-ಮೊದಲ ಕನ್ನಡಿಗ.
ಕೇಶವನ್ ಇಂದು ವಿಶ್ವಖ್ಯಾತ ಸೈಕ್ಯಾಟ್ರಿಸ್ಟ್. ಆದರೆ ಆವರಿಂದಿಗೂ ಕನ್ನಡ ಮತ್ತು ಕನ್ನಡತನವನ್ನುಳಿಸಿಕೊಂಡಿದ್ದಾರೆ. ಅಮೆರಿಕಾದ ತಮ್ಮ ಮನೆಯಲ್ಲಿ ಕನ್ನಡ ಪುಸ್ತಕ ಭಂಢಾರ ಹೊಂದಿದ್ದಾರೆ. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ತಮ್ಮ ಭಟ್ಟರ ಕೈಲಿ ಕೋಕೋ ಕೋಲಾ ಪುಸ್ತಕವನ್ನು ಡಾ.ಕೇಶವನ್ ಗೆ ಅರ್ಪಿಸಿದ್ದಾರೆ.‌ ಡಾ.ಕೇಶವನ್‌ ಪತ್ನಿ ಅಶಾ ಕೂಡ ವೈದ್ಯೆ.ಪ್ರಸ್ತುತ ಹಾರ್ವರ್ಡ್‌ ನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಸಣ್ಣ ಗ್ರಾಮವಾಗಿರುವ ಮಚ್ಚೇರಿ ಗ್ರಾಮದ ಹೆಸರನ್ನು ವಿಶ್ವವಿಖ್ಯಾತಗೊಳಿಸಿರುವ ಡಾ.ಮಚ್ಷೇರಿ ಕೇಶವನ್ ಬಗ್ಗೆ ಮಾಹಿತಿಗಾಗಿ ” matcheri s.keshavan’ ಎಂದು ಅಂತರ್ಜಾಲದಲ್ಲಿ  ಹುಡುಕಬಹುದು.