
ಕಡೂರು : ಏಪ್ರಿಲ್ 6 ಮತ್ತು 7 ರಂದು ನಡೆಯಲಿರುವ 21 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಬಿಡುಗಡೆಗೊಳಿಸಿದರು.
ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕಡೂರು ಪಟ್ಟಣದಲ್ಲಿ ನಡೆಯಲಿರುವುದು ಸಂತಸ ತಂದಿದೆ. ಸಮ್ಮೇಳನ ರಚನಾತ್ಮಕವಾಗಿ ನಡೆದು ಯಶಸ್ವಿಯಾಗಲು ಕಡೂರಿನ ಜನತೆ ಸಹಕರಿಸಬೇಕು ಎಂದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಸಮ್ಮೇಳನ ಅರ್ಥಪೂರ್ಣವಾಗಿ ನಡೆದು ಯಶಸ್ವಿಯಾಗಬೇಕೆಂಬ ಆಶಯ ತಮ್ಮದಾಗಿದೆ. ಬಯಲು ಭಾಗದ ಎಲ್ಲ ವಿಶೇಷತೆಗಳನ್ನು ಒಳಗೊಂಡ ಅರ್ಥಪೂರ್ಣ ಲಾಂಛನ ಇಂದು ಬಿಡುಗಡೆಯಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಸಿ.ಆರ್.ಪ್ರವೀಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿಕಲ್ಲೇಶ್, ಕಸಾಪ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಲತಾರಾಜಶೇಖರ್, ಮರುಗುದ್ದಿ ಮನು, ಯರದಕೆರೆರಾಜಪ್ಪ, ರಾಘವೇಂದ್ರ, ಕೃಷ್ಣಪ್ಪ ಇದ್ದರು.
