ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಇಡೀ ಆಸ್ಪತ್ರೆಯನ್ನು ಸುತ್ತಿದ ಸಿ.ಟಿ.ರವಿ ನೀರಿನ ವ್ಯವಸ್ಥೆಯನ್ನು ಪರೀಕ್ಷಿಸಲು ಶೌಚಾಲಯದೊಳಕ್ಕೂ ಹೋಗಿ ಪರಿಶೀಲಿಸಿದರು.
ನೀರಿನ ಸಮಸ್ಯೆಯಿದೆ,ಡಯಾಲಿಸಿಸ್ ಇಲ್ಲ,ಆಸ್ಪತ್ರೆ ಶುಚಿಯಾಗಿರಿಸಿಲ್ಲ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ರವಿ ಭೇಟಿ ನೀಡಿದ್ದರು.
