ಕಡೂರು: ನಾಡು ಕಂಡ ಧೀಮಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ವೈಖರಿ ಜನಸಾಮಾನ್ಯರ ಪಾಲಿಗೆ ನೆಮ್ಮದಿ ನೀಡುವಂತಹುದಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ಭಂಡಾರಿ ಶ್ರೀನಿವಾಸ್ ಅಭಿಮಾನಿ ಬಳಗದ ಅಧ್ಯಕ್ಷ ಮರುಗುದ್ದಿ ಮನು ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಿದ್ದರಾಮಯ್ಯ ಅವರು ಅತೀ ಧೀರ್ಘಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಪ್ರಯುಕ್ತ ಭಂಡಾರಿ ಶ್ರೀನಿವಾಸ್ ಅಭಿಮಾನಿ ಬಳಗ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವರಾಜ ಅರಸು ಅವರ ನಂತರ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಅತಿಧೀರ್ಘಕಾಲ ಆಡಳಿತ ನಡೆಸುತ್ತಿರುವುದು ಮಾತ್ರವಲ್ಲ- ಜನಪರ ಆಡಳಿತ ನೀಡುವುದರ ಜೊತೆ ಬಡವರ ಪಾಲಿಗೆ ಅಕ್ಷರಶಃ ಅನ್ನದಾತನೆನಿಸಿಕೊಂಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ ಸರ್ಕಾರದ ಒಂದಲ್ಲ ಒಂದು ಯೋಜನೆಯನ್ನು ತಲುಪುವಂತೆ ಮಾಡಿ ರಾಜ್ಯದ ಜನತೆಯ ಮನಗೆದ್ದಿದ್ದಾರೆ.ಅವರಂತಹ ಸ್ವಚ್ಚ ರಾಜಕಾರಣ ಇತರರಿಗೆ ಆದರ್ಶ. ಅವರ ಸಾಧನೆ ನಮಗೆಲ್ಲ ಸ್ಪೂರ್ತಿಯಾಗಲಿ ಎಂಬ ಆಶಯದಿಂದ ಬಳಗದ ವತಿಯಿಂದ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡ ಕೆ.ಎಚ್.ಶಂಕರ್ ಮಾತನಾಡಿ, ಸಿದ್ದರಾಮಯ್ಯ ಎಂದರೆ ಸ್ವಚ್ಚರಾಜಕಾರಣ ಮತ್ತು ನೇರವಂತಿಕೆ. ಇಡೀ ಕರ್ನಾಟಕ ರಾಜ್ಯದ ಜನತೆ ನೆಮ್ಮದಿಯಾಗಿರಬೇಕೆಂಬ ಆಶಯ ಸಿದ್ದರಾಮಯ್ಯ ಅವರದ್ದಾಗಿದೆ.ಈ ನಿಟ್ಟಿನಲ್ಲಿ ಅವರು ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಪಾಲಿಗೆ ನೆಮ್ಮದಿಯುತ ಜೀವನ ನಡೆಸಲು ಪೂರಕವಾಗಿವೆ. ಸಿದ್ದರಾಮಯ್ಯನವರ ಆಡಳಿತ ಜನಪರ ನಿಲುವನ್ನು ಸದಾ ಪ್ರತಿಪಾದಿಸತ್ತದೆ ಎಂದರು.
ಪುರಸಭೆ ನಾಮನಿರ್ದೇಶಿತ ಸದಸ್ಯ ಕೃಷ್ಣಪ್ಪ ಮಾತನಾಡಿ, ದೇವರಾಜು ಅರಸರ ನಂತರ ದಲಿತರಿಗೆ ಸ್ಥೈರ್ಯ ತಂದಿತ್ತ ರಾಜಕಾರಣಿ ಎಂದರೆ ಸಿದ್ದರಾಮಯ್ಯನವರು. ದೇಶದ ಇತರೆ ರಾಜ್ಯಗಳಿಗೆ ಮಾದರಿಯಾದ ಆಡಳಿತ ನೀಡುತ್ತಿದ್ದಾರೆ.ಅವರ ಆಡಳಿತದಿಂದ ಕರ್ನಾಟಕ ರಾಜ್ಯ ಮಾದರಿ ರಾಜ್ಯವಾಗಿದೆ ಎಂದರು.
ಈಸಂದರ್ಭದಲ್ಲಿ ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ನಡೆಸಿ ಪುಷ್ಪವೃಷ್ಠಿಗೈದರು. ಸಿಹಿ ಹಂಚಿ ಸಂಭ್ರಮಿಸಿದರು. ಚಙದ್ರಮೌಳೀಶ್ವರ ಹಾಗೂ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಖಂಡರಾದ ಯರದಕೆರೆ ರಾಜಪ್ಪ, ಡಿಷ್ ಮಜಣ್ಣ,ಕಾಂತರಾಜು, ಅಲ್ಪಸಂಖ್ಯಾತ ಘಟಕದ ಮೊಹಮದ್ ಆರೀಫ್, ಪೋಸ್ಟ್ ಮಂಜುನಾಥ್, ಆಟೋ ಸಂಘದ ಅಧ್ಯಕ್ಷ ರಾಜು ಮತ್ತಿತರರಿದ್ದರು.
ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಂಡಾರಿ ಶ್ರೀನಿವಾಸ್ ಅಭಿಮಾನಿಗಳು



