ಕಡೂರು: ತಾಲ್ಲೂಕಿನ ಲಕ್ಕೇನಹಳ್ಳಿ ತಾಂಡ್ಯದ ಸರ್ಕಾರಿ ಗೋಮಾಳದಲ್ಲಿ ಇಸ್ಪೀಟ್ ಆಡುತ್ತಿದ್ದ 9 ಜನರನ್ನು ವಶಕ್ಕೆ ಪಡೆದು ಕಡೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಸ್ಪೀಟ್ ಆಟದಲ್ಲಿ ಬಳಸಿದ್ದ 33350 ರೂಪಾಯಿಗಳನ್ನು ವಶಪಡಿಕೊಳ್ಳಲಾಗಿದೆ.
ಇಸ್ಪೀಟ್ ಆಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಕಡೂರು ಪೊಲೀಸರು ಪಿಎಸೈ ಸಜಿತ್ ಕುಮಾರ್ ಅವರ ನೇತೃತ್ವದಲ್ಲಿ ಧಾಳಿ ನಡೆಸಿದ್ದಾರೆ.ಪೊಲೀಸ್ ತಂಡದಲ್ಲಿ ಸಿಬ್ಬಂದಿಗಳಾದ ರೇಣುಕಾ ಪ್ರಸಾದ್,ಧನಪಾಲನಾಯ್ಕ,ಸ್ವಾಮಿ,ಮಧುಕುಮಾರ್,ಮಂಜುನಾಥ್,ಸುರೇಶ್,ಶಿವು ಭಾಗವಹಿಸಿದ್ದರು.

