.ಕಡೂರು: ವ್ಯಕ್ತಿತ್ವ ಬೆಳೆದರೆ ವ್ಯಕ್ತಿಗೆ ಬೆಲೆ ದೊರೆಯುತ್ತದೆ ಎಂಬ ಆಶಯವನ್ನಿಟ್ಟುಕೊಂಡು ಮಹಿಳಾ ಸಬಲೀಕರಣ ಸಾಧಿಸುವ ಗುರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದಾಗಿದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಬಿ.ಸಿ.ಗೀತಾ ಹೇಳಿದರು.
ಸಿಂಗಟಗೆರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕಲ್ಲೇಶ್ವರ ಮತ್ತು ಆಂಜನೇಯ ಸ್ವಾಮಿ ಸಮಿತಿ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆ ಅನೇಕ ಯೋಜನೆಗಳನ್ನು ರೂಪಿಸಿದೆ. ಕೇವಲ ಸಾಲ ಕೊಡುವುದಷ್ಟೆ ಸಂಸ್ಥೆಯ ಕಾರ್ಯವಲ್ಲ. ಕೊಟ್ಟ ಸಾಲ ಸದುಪಯೋಗವಾಗಿ, ಮಹಿಳೆಯರು ಆರ್ಥಿಕವಾಗಿ ಮೇಲೇರಿ ಸ್ವಾವಲಂಬಿಗಳಾಗಬೇಕೆಂಬ ನಿಟ್ಟಿನಲ್ಲಿ ಸದಾ ಜೊತೆಗಿದ್ದು ಮಾರ್ಗದರ್ಶನ ನೀಡುತ್ತದೆ. ವೈಯುಕ್ತಿಕ ಯೋಜನೆಗಳ ಜೊತೆ ಸಾಮಾಜಿಕ ಕಾರ್ಯಗಳಲ್ಲೂ ಸಂಸ್ಥೆ ಮಂಚೂಣಿಯಲ್ಲಿದೆ. ಕೆರೆ ಹೂಳೆತ್ತುವುದು, ದೇವಸ್ಥಾನಗಳ ನಿರ್ಮಾಣಕ್ಕೆ ಧನ ಸಹಾಯ ನೀಡುವುದು ಮುಂತಾದವುಗಳ ಜೊತೆ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ನೀಡುವಿಕೆ, ವಿದ್ಯಾರ್ಥಿಗಳಿಗೆ ಸಹಾಯಧನ,ವೃದ್ಧರಿಗೆ ಮಾಸಾಶನವನ್ನು ನೀಡಲಾಗುತ್ತಿದೆ. ಮಹಿಳಾ ಸ್ವಾವಲಂಬನೆ ನಿಟ್ಟಿನಲ್ಲಿ ಯೋಜನೆಯ ಕಾರ್ಯಪ್ರಗತಿ ಪ್ರಶಂಸೆ ಪಡೆದಿದೆ ಎಂದರು.
ಆಧುನಿಕತೆಯ ಭರಾಟೆಯಲ್ಲಿ ಯಾವುದಕ್ಕೂ ಸಮಯವಿಲ್ಲದತಾಗಿದೆ. ಯಾಂತ್ರೀಕರಣದ ಜಗತ್ತಿನಲ್ಲಿ ಸಮಯ ವ್ಯರ್ಥವಾಗದಂತೆ ಕೆಲಸವಾದರೂ ಸಮಯವಿಲ್ಲ ಎಂಬ ಸಿದ್ದ ಉತ್ತರ ಎಲ್ಲರಲ್ಲೂ ದೊರೆಯುತ್ತದೆ.ಈ ಅಮೂಲ್ಯ ಸಮಯವನ್ನುಮೊಬೈಲ್ ಹಾಗೂ ದೃಶ್ಯ ಮಾಧ್ಯಮಗಳು ಕಬಳಿಸಿ ನಮ್ಮ ತನವನ್ನೆ ಮರೆಯುವಂತಾಗಿದೆ ಎಂದು ವಿಷಾಧಿಸಿದರು.
ಉಪನ್ಯಾಸಕ ಜೆ.ರವಿ ಮಾತನಾಡಿ, ಬದುಕು ಬದಲಾಗಿಲ್ಲ.ಬದುಕುವ ರೀತಿ ಬದಲಾಗಿದೆ. ವಿಜ್ಞಾನ ಮತ್ತು ತಙತ್ರಜ್ಞಾನ ನಮ್ಮ ಬದುಕನ್ನು ಸುಲಭವಾಗಿಸಿವೆ.ಆದರೆ ಅರ್ಥಪೂರ್ಣ ಬದುಕು ನಮ್ಮದಾಗಿಲ್ಲ. ವೈಚಾರಿಕ ದೃಷ್ಟಿಕೋನದಿಂದ ನಮ್ಮ ಬದುಕನ್ನು ನೋಡಬೇಕು.ಆತ್ಮಾವಲೋಕನಮಾಡಿಕೊಳ್ಳಬೇಕು.ಅವಿರತ ದುಡಿಮೆಯಿಂದ ಕೂಡಿದ ಸಂತೃಪ್ತ ಜೀವನ ನಮ್ಮದಾಗಬೇಕಿದೆ ಎಂದರು.
ಫೇರ್ ನೆಸ್ ಫೌಙಡೇಷನ್ ಅಧ್ಯಕ್ಷ ಎಂ.ಎನ್.ಜಗದೀಶ್ ಮಾತನಾಡಿ, ನಮಗೆಲ್ಲವನ್ನೂ ನೀಡಿರುವ ದೇವರ ಮುಂದೆ ಮತ್ತಷ್ಟು ಬೇಡಿಕೆಗಳನ್ನು ಸದಾ ಇಡುತ್ತೇವೆ.ಸ್ವಾರ್ಥದಿಙದ ಕೂಡಿದ ಬೇಡಿಕೆಯತ್ತ ದೇವರು ಗಮನಹರಿಸುವುದಿಲ್ಲ. ಬದಲಾಗಿ ಎಲ್ಲರಿಗೂ ಒಳಿತು ಬಯಸುವ ಸ್ವಾರ್ಥರಹಿತ ಬೇಡಿಕೆಯನ್ನು ದೇವರು ಮನ್ನಿಸುತ್ತಾನೆ.ನೂರಾರು ಜನ ಭಾಗವಹಿಸಿ ಪೂಜೆ ಮಾಡಿದ್ದೇವೆ.ಆದರೆ ಎಷ್ಟು ಜನ ಲೋಕಕಲ್ಯಾಣಕ್ಕಾಗಿ ದೇವರನ್ನು ಬೇಡಿಕೊಂಡೆವು ಎಂಬ ಆತ್ಮಾವಲೋಕನ ನಡೆಸಿಕೊಳ್ಳುವ ಅಗತ್ಯವಿದೆ ಎಂದರು.
ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಸಿಂಗಟಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುಮಾಲ ಕಾರ್ಯಕ್ರಮ ಉದ್ಘಾಟಿಸಿದರು.ಶ್ರೀಕಲ್ಲೇಶ್ವರ ಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಕೆ.ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯಿತಿ ಸದಸ್ಯ ಸಿ.ಗಿರೀಶಾರಾಧ್ಯ,
ಡಿ.ರೇಣುಕಾರಾಧ್ಯ ಮತ್ತಿತರರು ಇದ್ದರು.

