ಕಡೂರು: ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದೆ. ಮಳೆಯ ರಭಸಕ್ಕೆ ರೈಲ್ವೆ ಹಳಿಗಳು ಹಾನಿಗೀಡಾಗಿ ರೈಲ್ವೆ ಸಿಬ್ಬಂದಿಗಳ ಸಮಯಪ್ರಜ್ಞೆ ದೊಡ್ಡ ಅನಾಹುತವೊಂದನ್ನು ತಪ್ಪಿಸಿದೆ.
ಬೆಳಿಗ್ಗೆ 7-10 ಕ್ಕೆ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲು ಅದೃಷ್ಟವಶಾತ್ ಅನಾಹುತದಿಂದ ಪಾರಾಗಿದೆ.
ಕಣಿವೆ ರೈಲ್ವೆ ನಿಲ್ದಾಣದ ಬಳಿ ಭಾರೀ ಮಳೆಗೆ ರೈಲ್ವೆ ಹಳಿಗಳ ಜಲ್ಲಿ ಕಲ್ಲುಗಳು ಕೊಚ್ಚಿಹೋಗಿ, ಬೇಸ್ ಗಳು ಜರುಗಿದ್ದವು.ಸಿಬ್ಬಂದಿಗಳು ಕೂಡಲೇ ರೈಲು ಚಾಲಕನಿಗೆ ಮಾಹಿತಿ ನೀಡಿದಾಗ ಚಾಲಕರು ತಕ್ಷಣವೇ ರೈಲು ನಿಲ್ಲಿಸಿದ್ದಾರೆ.ನಂತರ ರೈಲ್ವೆ ಹಳಿಯನ್ನು ಸಿಬ್ಬಂದಿ 30 ನಿಮಿಷಗಳ ಕಾಲ ಶ್ರಮಿಸಿ ಸರಿಪಡಿಸಿದರು. ಅನಾಹುತ ತಪ್ಪಿಸಿದ ರೈಲ್ವೆ ಸಿಬ್ಬಂದಿಗಳ ಸಮಯಪ್ರಜ್ಞೆಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
