Spread the love

ಎತ್ತಿನಭುಜ

ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಎತ್ತಿನ ಭುಜ ಕ್ಕೆ ಚಾರಣ ಕೈಗೊಳ್ಳುವುದನ್ನು ನಿಷೇಧಿಸಿ ಅರಣ್ಯ ಇಲಾಖೆ ಆದೇಶಿಸಿದೆ.
ಮೂಡಿಗೆರೆ ತಾಲ್ಲೂಕಿನಲ್ಲಿರುವ
ಎತ್ತಿನ ಭುಜದ ಪ್ರಾಕೃತಿಕ ಸೌಂದರ್ಯ ಸವಿಯಲು ಪ್ರವಾಸಿಗರು ಏಳು ಕಿ.ಮೀ. ಚಾರಣ ಹೋಗುತ್ತಿದ್ದರು. ನಿರಂತರ ಮಳೆಯಿಂದಾಗಿ ಸದಾ ಮಂಜು ಕವಿದಿರುವ ಈ ತಾಣಕ್ಕೆ ವಾಹನಗಳು ಹೋಗುವುದಿಲ್ಲ. ಏನಾದರೂ ಅನಾಹುತಗಳಾದರೆ ರಕ್ಷಣೆಯೂ ಬಹಳ ಕಷ್ಟಕರ. ಈ ಕಾರಣದಿಂದ ಎತ್ತಿನ ಭುಜ ಕ್ಕೆ ಚಾರಣ ನಿಷೇಧಿಸಲು ಸ್ಥಳೀಯರು ಆಗ್ರಹಿಸಿದ್ದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜುಲೈ 1 ರಿಂದ 31 ರ ವರೆಗೆ ಎತ್ತಿನ ಭುಜ ಪ್ರದೇಶದಲ್ಲಿ ಚಾರಣ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲಿ ಒಬ್ಬ ಕಾವಲುಗಾರನನ್ನೂ ನಿಯೋಜಿಸಲಾಗಿದೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!