Spread the love

 

ಕಡೂರು: ಪಿಎಲ್.ಡಿ.ಬ್ಯಾಂಕ್ ನ ಹೊಸ ಕ್ಷೇತ್ರಗಳ ಮೀಸಲಾತಿ ಪಟ್ಟಿಗೆ ಸೋಮವಾರ ನಡೆದ ಪಿಎಲ್ಡಿ ಬ್ಯಾಂಕ್ ವಿಶೇಷ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ಈ ಸಂದರ್ಭದಲ್ಲಿ‌ಮಾತನಾಡಿದ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ರೈತ ಸ್ನೇಹಿಯಾಗಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ರೈತರಿಗೆ ದೊರೆಯುವ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಮಾಡುವುದರ ಜೊತೆ ಸಾಲ ನೀಡಿಕೆ ಹಾಗೂ ಮರುಪಾವತಿಯಲ್ಲಿಯೂ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಶೀಘ್ರ ಸೇವೆ ನೀಡುವಲ್ಲಿ ಬ್ಯಾಂಕ್ ಗ್ರಾಹಕರ ವಿಶ್ವಾಸ ಗಳಿಸಿದೆ.ಎಲ್ಲ ನಿರ್ದೇಶಕರು ಬ್ಯಾಂಕ್ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಿದ್ದರಿಂದಲೇ ಪಿಎಲ್ಡಿ ಬ್ಯಾಂಕ್ ಅತ್ಯಂತ ವಿಶ್ವಾಸಾರ್ಹವಾಗಿ ಗ್ರಾಹಕರ ಮನಗೆದ್ದಿದೆ ಎಂದರು.
ಬ್ಯಾಂಕ್ ನಿರ್ದೇಶಕರುಗಳು ಇದ್ದರು.
——–
ಒಟ್ಟು 14 ನಿರ್ದೇಶಕರ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಸಿದ್ದಪಡಿಸಲಾಗಿದ್ದು, ವಿವರ ಹೀಗಿದೆ.

ಸಖರಾಯಪಟ್ಟಣ-(ಪರಿಶಿಷ್ಠ ಜಾತಿ),ಹಿರೇನಲ್ಲೂರು( ಪರಿಶಿಷ್ಠ ವರ್ಗ), ಕಡೂರು ಟೌನ್( ಹಿಂದುಳಿದ ವರ್ಗ-ಪ್ರವರ್ಗ ಅ), ಚೌಳಹಿರಿಯೂರು( ಪರಿಶಿಷ್ಠ ವರ್ಗ- ಪ್ರವರ್ಗ ಬ), ಮತಿಘಟ್ಟ ಮತ್ತು ಸಿಂಗಟಗೆರೆ( ಮಹಿಳೆ), ಯಲ್ಲಂಬಳಸೆ,ಪಂಚನಹಳ್ಳಿ, ದೇವನೂರು, ಬೀರೂರು,ಸರಸ್ವತೀಪುರ,ಪಟ್ಟಣಗೆರೆ,ಯಗಟಿ ಹಾಗೂ ಸಾಲಪಡೆಯದ ಕ್ಷೇತ್ರ( ಎಲ್ಲವೂ ಸಾಮಾನ್ಯ)

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!