Spread the love

 

ಚಿಕ್ಕಮಗಳೂರು: ಪ್ರಕೃತಿ ಸೌಂದರ್ಯದ ನೆಲೆವೀಡಾದ ಚಿಕ್ಕಮಗಳೂರು ಜಿಲ್ಲೆಗೆ ಹೊರಜಿಲ್ಲೆಗಳಿಂದ ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ. ಪ್ರಕೃತಿ ಸೌಂದರ್ಯ ಆಸ್ವಾದಿಸುವವರ ನಡುವೆ ಮೋಜು ಮಸ್ತಿಗೆಂದೇ ಬರುವ ಪ್ರವಾಸಿಗರು ಹಲವರು. ಕುಡಿವ ನಶೆಯಲ್ಲಿ ಹೊಡೆದಾಟಕ್ಕೂ ಇಳಿಯುವ ಘಟನೆಗಳು ಮರುಕಳಿಸುತ್ತಿವೆ. ಮೂಡಿಗೆರೆ ಪಟ್ಟಣದ ಬಸ್ ಸ್ಟಾಂಡ್ ರಸ್ತೆಯಲ್ಲಿ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕುಡಿದ ನಶೆಯಲ್ಲಿ ಮೂವರು ಯುವಕರು ಬಡಿದಾಡಿಕೊಂಡಿದ್ದಾರೆ.ಸ್ಥಳೀಯರು ಜಗಳ ಬಿಡಿಸಲು ಎಷ್ಟೇ ಪ್ರಯತ್ನಪಟ್ಟರೂ ಮತ್ತೆ ಮತ್ತೆ ಬಡಿದಾಡಿಕೊಂಡಿದ್ದಾರೆ….ಪ್ರವಾಸಿಗರ ರಂಪಾಟದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!