– ಫಾರೆಸ್ಟ್ ಗಾರ್ಡ್ ಶರತ್ ಮೂರು ದಿನಗಳಿಂದ ನಾಪತ್ತೆ.
– ಸಖರಾಯಪಟ್ಟಣ ನೀಲಗಿರಿಪ್ಲಾಂಟೇಷನ್ ನಲ್ಲಿ ಶರತ್ ಬೈಕ್,ಜರ್ಕಿನ್ ಪತ್ತೆ.
– ಹುಡುಕಾಟ ಮುಂದುವರೆಸಿರುವ ಸಖರಾಯಪಟ್ಟಣ ಪೊಲೀಸರು.
ಕಡೂರು: ಅರಣ್ಯ ಇಲಾಖೆ ಗಾರ್ಡ್ ಒಬ್ಬರು ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ.ಮಡಿಕೇರಿ ಮೂಲದ ಶರತ್(33) ನಾಪತ್ತೆಯಾದ ಪಾರೆಸ್ಟ್ ಗಾರ್ಡ್. ಸಖರಾಯಪಟ್ಟಣದ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಶರತ್ ಬೈಕ್ ಮತ್ತು ಜರ್ಕಿನ್ ಪತ್ತೆಯಾಗಿದೆ. ಪೊಲೀಸರು ಈ ಪ್ರದೇಶದಲ್ಲಿ ಶರತ್ ಗಾಗಿ ಹುಡುಕಾಟ ನಡೆಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
