Spread the love

ಕಡೂರು: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯಂದು ಶನಿವಾರ ಕಡೂರಿನ ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಯೋಗದಿನ ಆಚರಿಸಿದರು.
ತಂಗಲಿ ಗ್ರಾಮದ ಆಂಜನೇಯ ದೇವಸ್ಥಾನದ ಮುಂದೆ ಮುಂಜಾನೆ ಯೋಗ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಯೋಗ ವಿದ್ಯೆಯ ಮಹತ್ವ ಮತ್ತು ಯೋಗದಿನಾಚರಣೆಯ ದಿನದ ಬಗ್ಗೆ ಮಾಹಿತಿ ನೀಡಿದರು. ನಂತರ ಶಾಲಾ ಆವರಣದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಮೂಹಿಕವಾಗಿ ಯೋಗ ಪ್ರದರ್ಶನ ನೀಡಿದರು. ಏಕಕಾಲದಲ್ಲಿ ವಿವಿಧ ಕ್ಲಿಷ್ಟಕರ ಆಸನಗಳು ಮತ್ತು ಸೂರ್ಯನಮಸ್ಕಾರ ಗಮನ ಸೆಳೆಯಿತು.
ಪ್ರಜ್ಞಾ ಶಾಲೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸನ್ನ ಮಾತನಾಡಿ, ಯೋಗ ಎಂಬುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿಡುವ ಸಾಧನ.ವಿಶ್ವಕ್ಕೆ ಭಾರತೀಯ ನೆಲದ ಕೊಡುಗೆಯಾಗಿದೆ. ಇತ್ತೀಚಿನವರೆಗೂ ಯೋಗ ವಿದ್ಯೆಯ ಮಹತ್ವ ಹೆಚ್ಚು ಪ್ರಚಾರವಿಲ್ಲದೆ ಸುಪ್ತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯೋಗ ವಿದ್ಯೆಗೆ ಅಂತರ್ರಾಷ್ಟ್ರೀಯ ಮನ್ನಣೆ ದೊರೆತಿದೆ. ಯೋಗ ವಿದ್ಯೆ ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಲಿ..ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಯೋಗ ವಿದ್ಯೆಯ ಮಹತ್ವ ಅರಿತು ಇತರರಿಗೂ ಅರಿವು ಮೂಡಿಸಲು ಮುಂದಾಗಬೇಕು ಎಂದರು.
ಪ್ರಜ್ಞಾ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎನ್.ರಾಜಣ್ಣ, ಉಪಾಧ್ಯಕ್ಷ ಡಿ.ಪ್ರಶಾಂತ್, ಶಾಲಾ ಶಿಕ್ಷಕ ವರ್ಗದವರು ಇದ್ದರು.

Kadur: On the occasion of International Yoga Day, students of Pragna School in Kadur celebrated Yoga Day with enthusiasm on Saturday.
The students performed a yoga performance in front of the Anjaneya Temple in Tangali village in the morning and informed the villagers about the importance of yoga and the day of Yoga Day. Later, more than a thousand students performed yoga collectively in the school premises.
Pragya School General Secretary Manjunath Prasanna said, Yoga is a tool to maintain our physical and mental health. It is a gift from India to the world. Until recently, the importance of yoga was dormant without much publicity. But in recent days, yoga has gained international recognition. Let yoga become an integral part of our daily lives. He said that students should understand the importance of yoga along with education and take the initiative to make others aware.
Pragna Board President K.N. Rajanna, Vice President D. Prashant, and school teachers were present.
-MN corespondent

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!