ಚಿಕ್ಕಮಗಳೂರು: ಶೃಂಗೇರಿ ಶಾರದಾ ಮಠಕ್ಕೆ ಜಮ್ಮು- ಕಾಶ್ಮೀರ ರಾಜ್ಯಪಾಲ ಮನೋಜ್ ಸಿನ್ಹಾ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದರು.
ಕುಟುಂಬ ಸಮೇತ ಶೃಂಗೇರಿಗೆ ಆಗಮಿಸಿದ ಮನೋಜ್ ಸಿನ್ಹಾ ಅವರನ್ನು ಮಠದ ಸಿಬ್ಬಂದಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಗದ್ಗುರುಗಳ ಆಶೀರ್ವಾದ ಪಡೆದರು.
ಗೌರ್ನರ್ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಬಂಧೋಬಸ್ತ್ ಏರ್ಪಡಿಸಲಾಗಿತ್ತು. ಕೇರಳದಿಂದ ರಸ್ತೆ ಮೂಲಕ ಮನೋಜ್ ಸಿನ್ಹಾ ಅವರು ಶೃಂಗೇರಿಗೆ ಆಗಮಿಸಿದ್ದರು.
