Oplus_0
Spread the love

ಮುಖ್ಯಾಂಶಗಳು.

– ಕಡೂರಿನಲ್ಲಿ ಕೆ.ಆರ್.ಐ.ಡಿ.ಎಲ್. ಉಪವಿಭಾಗೀಯ ಕಚೇರಿ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್.

–  ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಭಾಗಿ

 ಕಡೂರು: ಕ್ಷೇತ್ರದಲ್ಲಿ ಆಗಿರುವ ಆಗುತ್ತಿರುವ ಅಭಿವೃದ್ಧಿ‌ಕಾರ್ಯಗಳೇ ವಿರೋಧಿಗಳ ಟೀಕೆಗೆ ಉತ್ತರ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ  ಬೈಪಾಸ್ ರಸ್ತೆ ಬಳಿ ನಿರ್ಮಾಣಗೊಂಡಿರುವ ಕೆಆರ್‌ಐಡಿಎಲ್ ಉಪವಿಭಾಗೀಯ   ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ವಿರೋಧಿ ಟೀಕೆಗೆ ಉತ್ತರವಾಗಿ ಕಡೂರು ಕ್ಷೇತ್ರ ಒಂದರಲ್ಲೇ ಕಳೆದ ಎರಡು ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.ಇಲ್ಲಿಯ ತನಕ ಯಾವುದೇ ಶಾಸಕರು ಭೇಟಿ ನೀಡದಂತಹ ಬಾಪೂಜಿ ನಗರ,ಗಡುಗನಹಳ್ಳಿ,ಕಾರೇಹಳ್ಳಿಯಂತಹ ಅನೇಕ ಗ್ರಾಮಗಳಿಗೆ ಅನುದಾನ ನೀಡಲಾಗಿದೆ. ಕೆಆರ್‌ಡಿಎಲ್ ಸಂಸ್ಥೆಯ ಮೂಲಕವೇ 50 ಕೋಟಿಗೂ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.220 ಕ್ಕೂ ಹೆಚ್ಚು ಗ್ರಾಮಗಳ ಒಳಗಿನ ರಸ್ತೆಗಳಿಗೆ ಅನುದಾನ ನೀಡಲಾಗಿದೆ. ಬಹುಮುಖ್ಯವಾಗಿ ಜನಸಾಮಾನ್ಯರಿಗೂ ಸಹ ಸುಲಭ ಸಂಪರ್ಕಕ್ಕೆ ದೊರೆಯುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಕೆ.ಆರ್.ಐ.ಡಿ.ಬಿ.ಎಲ್. ಉಪವಿಭಾಗೀಯ ಕಚೇರಿಗೆ ನೂತನ ಕಟ್ಟಡ ನಿರ್ಮಾಣವಾಗಿರುವುದು ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಶಾಸಕ ಆನಂದ್ ಮತ್ತು ತಾವು ಜನರ ನಡುವೆ ಇದ್ದು ತಳಮಟ್ಟದಿಂದ ಬಂದು ಶಾಸಕರಾಗಿದ್ದೇವೆ. ಆದರೂ ಕ್ಷೇತ್ರದ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿಲ್ಲ.ಜಿಲ್ಲೆಯ ಐದೂ ಶಾಸಕರು ಸಂಘಟಿತವಾಗಿ ಕಾರ್ಯ ಮಾಡುತ್ತಿದ್ದೇವೆ.
ಭಧ್ರಾ ಉಪಕಣಿವೆ ಯೋಜನೆಯ 3 ನೇ ಹಂತದ ಕಾಮಗಾರಿಗೆ 411 ಕೋಟಿ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಹಂತದಲ್ಲಿದೆ.ಎತ್ತಿನ ಹೊಳೆ ಯೋಜನೆಯಲ್ಲಿ ತಾಲೂಕಿನ ಬೆಳವಾಡಿ,ದೇವನೂರು,ಮಾಚೇನಹಳ್ಳಿ ಮುಂತಾದ ಗ್ರಾಮಗಳಿಗೆ ನೀರು ಹರಿದು ಕೆರೆಗಳು ತುಂಬಿವೆ.ಇದರಿಂದ ಆ ಭಾಗದ ಅಂತರ್ಜಲ ಮಟ್ಟ ಹೆಚ್ಚಿದೆ.ಇದಕ್ಕೆಲ್ಲ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವೊಲಿಸುವಲ್ಲಿ ಶಾಸಕ ಆನಂದ್ ಮತ್ತು ನಾನು ಮಾಡಿದ ಪ್ರಯತ್ನ ಕಾರಣ.ಪ್ರತಿ ಜಿಲ್ಲೆಗೆ ಒಂದು ಜವಳಿ ಪಾರ್ಕ ನೀಡಿದರೆ ಚಿಕ್ಕಮಗಳೂರು ಜಿಲ್ಲೆಗೆ 2 ಜವಳಿ ಪಾರ್ಕ ನೀಡಲಾಗಿದೆ.ಕಡೂರಿಗೆ ಜವಳಿ ಪಾರ್ಕ್ ಮಂಜೂರಾಗಿರುವುದರ ಹಿಂದೆ ಶಾಸಕ ಆನಂದ್ ಅವರ ಶ್ರಮ ಅಡಗಿದೆ ಎಂದರು.
ಮೈಸೂರು ವಿಭಾಗ ಅಧೀಕ್ಷಕ ಅಭಿಯಂತರ ಗೋಪಾಲಪ್ಪ,ಕಡೂರು ಎಇಇ ವಿ.ಎನ್.ಅಶ್ವಿನಿ,ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್,ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ,ಇಓ ಸಿ.ಆರ್.ಪ್ರವೀಣ್,ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್,ಕಡೂರಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಶಶಿಕುಮಾರ್,ಉಪಾಧ್ಯಕ್ಷ ರಾಕೇಶ್  ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!