Spread the love
ಕಡೂರು: ಪರಸ್ಪರ ಸೌಹಾರ್ದಯುತವಾಗಿ, ಸಹೋದರತ್ವದಿಂದ ಬಾಳುವ ಆಶಯವೇ ಯೋಗ ವಿದ್ಯೆ ಎಂದು ಯೋಗಗುರು ಯಗಟಿ ಪ್ರಲ್ಹಾದ್ ಹೇಳಿದರು.
 ತಾಲ್ಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಯಶಸ್ವಿನಿ ಯೋಗಸಂಸ್ಥೆ ಮತ್ತು ಅಣ್ಣಿಗೆರೆ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಮತ್ತು ವಿಶ್ವ ಯೋಗದಿನಾಚರಣೆ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಯೋಗ ದೇಹ ಮತ್ತು ಮನಸ್ಸನ್ನು ಸಮಚಿತ್ತದಲ್ಲಿಡುವ ಮೂಲಕ ಆರೋಗ್ಯವಂತರಾಗಿರಲು ಸಹಕರಿಸುತ್ತದೆ, ಜೀವಾತ್ಮ ಮತ್ತು ಪರಮಾತ್ಮಾನ ಸಹಯೋಗವೇ ಯೋಗದ ಅಂತಿಮ ಗುರಿ, ಯೋಗದ ಅರ್ಥ ಸೇರಿಸುವುದು ಅಥವಾ ಜೋಡಿಸುವುದು ಎಂದರ್ಥ, ಯೋಗ ಚಿತ್ತ ವೃತ್ತಿನಿರೋದಃ ಎಂಬರ್ಥವು ಅಡಗಿದೆ. ವಿಶ್ವದಲ್ಲಿ ಶಾಂತಿ ನೆಮ್ಮದಿ ಸೌಹಾರ್ದತೆಯನ್ನು ಕಾಪಾಡುವ ಮೂಲಕ ವಸುದೈವ ಕುಟುಂಬಕಂ ಎಂಬ ಧ್ಯೇಯ ಯೋಗ ವಿದ್ಯೆಯದು ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಸಿಂಗಟಗೆರೆ  ಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಕೆ. ನಾಗರಾಜಪ್ಪ ಮಾತನಾಡಿ, ಅಣ್ಣಿಗೆರೆ ಗ್ರಾಮದಲ್ಲಿರುವ ಯಶಸ್ವಿನಿಯೋಗ ಸಂಸ್ಥೆ ಉಚಿತವಾಗಿ ಯೋಗದ ಅರಿವನ್ನು ಮಕ್ಕಳಿಂದ ವಯೋವೃದ್ಧರವರಗೆ ನೀಡುತ್ತ ಬಂದಿರುವುದು ಶ್ಲಾಘನೀಯ ಎಂದರು.
 ಶರಣರ ಭಾವಚಿತ್ರಕ್ಕೆ ಪುಷ್ಪನಮನ  ಮಾಡಿದ ತಾಲ್ಲೂಕು ಕುಳುವ ಸಮಾಜದ ಅಧ್ಯಕ್ಷ ಎ. ಜಿ ಗಿರೀಶ ಮಾತನಾಡಿ,ನಮ್ಮ ಮನಸ್ಸು ದೇಹವನ್ನು ನಿಯಂತ್ರಿಸುವ ಯೋಗ ವಿದ್ಯೆ ವಿಶ್ವಕ್ಕೆ ಭಾರತದ ಹೆಮ್ಮೆಯ ಕೊಡುಗೆ ಎಂದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಯೋಗ ವಿದ್ಯೆ ನಮ್ಮ ಆರೋಗ್ಯಕ್ಕೆ ಪೂರಕ ಹಾಗೂ ಮನಸ್ಸುಗಳನ್ನು ಸೇರಿಸುವ ಸಮನ್ವಯದ ಮಾಧ್ಯಮವೂ ಆಗಿದೆ ಎಂದರು.
ಕಾರ್ಯಕ್ರಮದ  ಸಾನ್ನಿಧ್ಯವನ್ನು ಯಳನಡು ಸಂಸ್ಥಾನದ ಜ್ಞಾನ ಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಮತ್ತು ದೊಡ್ಡ ಮಠ ಕೆ.ಬಿದರೆಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯಶಸ್ವಿನಿಯೋಗ ಸಂಸ್ಥೆಯ ಅಧ್ಯಕ್ಷ ಎ.ಎಂ.ಕುಮಾರಪ್ಪ ಯೋಗ ಗುರುಗಳಾದ ಬಿ.ಸಿ.ದೇವೇಂದ್ರಪ್ಪ ,ತಮ್ಮಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ.ಸುಜಾತಜಡೆಮಲ್ಲಪ್ಪ ಇದ್ದರು.ಈ ಸಂದರ್ಭದಲ್ಲಿ ಐ.ಎಫ್.ಎಸ್.ನಲ್ಲಿ 98 ನೇ ರ್ಯಾಂಕ್ ಗಳಿಸಿದ ಸೋಮನಹಳ್ಳಿ ವಿಶ್ವಾಸ್ ರನ್ನು ಅಭಿನಂದಿಸಲಾಯಿತು.
———–
Kadur: Yoga guru Yagati Pralhad said that the aim of yoga is to live in harmony and brotherhood with each other.
He gave a lecture on the Sharanara Beladingalu and World Yoga Day celebrations held in the taluk’s Annigere village under the joint auspices of Taluk Sharan Sahitya Parishad, Yashaswini Yoga Association and Annigere villagers.
Yoga helps to stay healthy by keeping the body and mind in balance, the ultimate goal of yoga is the collaboration of the soul and the Supreme Soul, the meaning of yoga is to connect, the meaning of yoga is the mind of Vrittanirodah. He said that the goal of yoga is to maintain peace, tranquility and harmony in the world and to become a Vasudaiva Kutumbakam.
The program was inaugurated by the President of the Development Committee of the Singatagere Kalleshwara Swamy Temple, B. K. Nagarajappa said that it is commendable that the Yashasviniyoga organization in Annigere village has been imparting yoga knowledge to children and the elderly for free.
A. G. Girish, the president of the Taluk Kulva Samaj, who paid floral tributes to the portrait of Sharan, said that the science of yoga, which controls our mind and body, is India’s proud contribution to the world.
K. Virupakshappa, the president of the Taluk Sharan Sahitya Parishad, said that the science of yoga is a supplement to our health and a medium of coordination that unites minds.
The program was graced by Jnana Prabhu Siddarama Desikendra Swamiji of Yalanadu Sansthan and Prabhukumar Shivacharya Swamiji of Dodda Mutt  K. Bidare.
The program was attended by A.M. Kumarappa, President of Yashasvini Yoga Institute, yoga guru B.C. Devendrappa, and Sujatha Jademallappa, President of Kadali Women’s Forum. On this occasion, Somanahalli Vishwas, who secured 98th rank in IFS, was congratulated.
-MN corespondentKadur: Yoga guru Yagati Pralhad said that the aim of yoga is to live in harmony and brotherhood with each other.
He gave a lecture on the Sharanara Beladingalu and World Yoga Day celebrations held in the taluk’s Annigere village under the joint auspices of Taluk Sharan Sahitya Parishad, Yashaswini Yoga Association and Annigere villagers.Yoga helps to stay healthy by keeping the body and mind in balance, the ultimate goal of yoga is the collaboration of the soul and the Supreme Soul, the meaning of yoga is to connect, the meaning of yoga is the mind of Vrittanirodah. He said that the goal of yoga is to maintain peace, tranquility and harmony in the world and to become a Vasudaiva Kutumbakam.The program was inaugurated by the President of the Development Committee of the Singatagere Kalleshwara Swamy Temple, B. K. Nagarajappa said that it is commendable that the Yashasviniyoga organization in Annigere village has been imparting yoga knowledge to children and the elderly for free.
A. G. Girish, the president of the Taluk Kulva Samaj, who paid floral tributes to the portrait of Sharan, said that the science of yoga, which controls our mind and body, is India’s proud contribution to the world.
K. Virupakshappa, the president of the Taluk Sharan Sahitya Parishad, said that the science of yoga is a supplement to our health and a medium of coordination that unites minds.
The program was graced by Jnana Prabhu Siddarama Desikendra Swamiji of Yalanadu Sansthan and Prabhukumar Shivacharya Swamiji of Dodda Mutt K. Bidare.
The program was attended by A.M. Kumarappa, President of Yashasvini Yoga Institute, yoga guru B.C. Devendrappa, and Sujatha Jademallappa, President of Kadali Women’s Forum. On this occasion, Somanahalli Vishwas, who secured 98th rank in IFS, was congratulated.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!