ಕಡೂರು: ಆಸ್ತಿ ವಿಚಾರವಾಗಿ ಕಲಹ ಏರ್ಪಟ್ಟು ಹಲ್ಲೆ ಯತ್ನ ನಡಸಿ ವಾಹನ ಜಖಂ ಗೊಳಿಸಿರುವ ಘಟನೆ ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ಆಲಘಟ್ಟ ಗ್ರಾಮದಲ್ಲಿ ನಡೆದಿದೆ. ಸ್ವಾಮಿ ಎಂಬುವವರು ರಾತ್ರಿ ತೋಟದಲ್ಲಿ ನೀರು ಬಿಡುವ ವೇಳೆ ಏಕಾ ಏಕಿ ಬಂದ ನಾಲ್ಕೈದು ಜನರು ಪಿತ್ರಾರ್ಜಿತ ಆಸ್ತಿ ಸರಿಯಾಗಿ ಭಾಗವಾಗಿಲ್ಲ. ಸರಿಯಾಗಿ ಭಾಗ ಮಾಡದಿದ್ದರೆ ನಿನ್ನನ್ನೂ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ಸ್ವಾಮಿ ಅವರ ಕಾರನ್ನು ಜಖಂ ಗೊಳಿಸಿದ್ದಾರೆ.
ಈ ಕುರಿತು ಕಲ್ಲೇಶಪ್ಪ,ಹರೀಶ್,ಸೋಮಶೇಖರಪ್ಪ ಮತ್ತು ಮನೋಜ್ ಎಂಬ ನಾಲ್ವರ ವಿರುದ್ಧ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
