Oplus_0
Spread the love

ಮುಖ್ಯಾಂಶಗಳು

-ಟಾಟಾ ನಗರ- ಯಶ್ವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಣೆ.

– ಕಡೂರು ರೈಲ್ವೆ ನಿಲ್ದಾಣದಲ್ಲಿ ವಶ.

– 3.10 ಲಕ್ಷ ಮೌಲ್ಯದ ಗಾಂಜಾ- ಒಬ್ಬನ ಬಂಧನ

ಸಾಂಧರ್ಭಿಕ ಚಿತ್ರ

ಕಡೂರು: ಕಡೂರು ರೈಲ್ವೆ ನಿಲ್ದಾಣದಲ್ಲಿಟಾಟಾ ನಗರ- ಯಶ್ವಂತ ಪುರ ರೈಲಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 5050 ಕೆ.ಜಿ.ಗಾಂಜಾವನ್ನು ರೈಲ್ವೆ ರಕ್ಷಣಾ ದಳದವರು ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಿದ್ದಾರೆ.ಬಿಹಾರ ಮೂಲದ ಮಹೇಂದ್ರದಾಸ್(57) ಬಂದಿತ ವ್ಯಕ್ತಿ.ಈತ ರೈಲಿನಲ್ಲಿ ಬೆಡ್ ರೋಲ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಜೂನ್ 14 ರಂದು ಸಂಜೆ 4 ಗಂಟೆ ಸಮಯದಲ್ಲಿ ಕಡೂರು ರೈಲ್ವೆ ನಿಲ್ದಾಣದಲ್ಲಿ ಖಚಿತ ಮಾಹಿತಿ ಮೇರೆಗೆ ಧಾಳಿ ನಡೆಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಆರ್.ಪಿ.ಎಫ್.ಭಧ್ರತಾ ಆಯುಕ್ತ ಜೆ.ಆರ್.ಸ್ಯಾಂ ಪ್ರಕಾಶ್ ಅವರ ನಿರ್ದೇಶನದಂತೆ ವಿಶೇಷ ತಂಡವು ಕಾರ್ಯಾಚರಣೆ ನಡೆಸಿದೆ‌.ಸಿಬಿಐ ಮೈಸೂರು ಸಹಾಯಕ ಉಪನಿರೀಕ್ಷಕ ಬಿ.ಆನಂದ್, ಆರ್.ಪಿ‌.ಎಫ್ ಅರಸೀಕೆರೆ ಸಹಾಯಕ ಉಪನಿರೀಕ್ಷಕ ಜಿ.ಶಿವಮೂರ್ತಿ, ಕಡೂರು ಅಬಕಾರಿ ಇನ್ಸ್ ಪೆಕ್ಟರ್ ಎಲ್.ಸಿ.ಸಂದೀಪ್ ಮತ್ತಿತರ ಸಿಬ್ಬಂದಿಗಳು ಕಾರ್ಯಾಚರಣೆ ತಂಡದಲ್ಲಿದ್ದರು. ವಶಪಡಿಸಿಕೊಂಡ ಗಾಂಜಾ ದ ಮೌಲ್ಯ ₹3.10 ಲಕ್ಷರೂಪಾಯಿಗಳಾಗಿದ್ದು, ಎನ್.ಡಿ.ಪಿ.ಎಸ್.ಕಾಯ್ದೆ ಪ್ರಕಾರ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!