Spread the love

ಚಿಕ್ಕಮಗಳೂರು:ಮಳೆಗಾಲ ಬಂತೆಂದರೆ ಮಲೆನಾಡಿನಲ್ಲಿ ಜಲಪಾತಗಳು ಮೈದುಂಬುತ್ತವೆ..ಶೃಂಗೇರಿ ಬಳಿಯ ಕಿಗ್ಗ ಸಮೀಪದ ಸಿರಿಮನೆ ಜಲಪಾತ ಮನಮೋಹಕವಾದುದು. ಜಲಪಾತದ ಬಳಿ ಹೋಗಲು ಒಂದಿಷ್ಟು ನಡೆಯಬೇಕು. ಆ ನಡಿಗೆ ನಿಜಕ್ಕೂ ರೋಚಕ…ಸುರಿವ ಮಳೆ…ನೆಲದಲ್ಲಿ ಹರಿಯುವ ನೀರಲ್ಲಿ ನಡೆದು ಹೋದರೆ ಇದ್ದಕ್ಕಿದ್ದಂತೆ ನಮ್ಮೆದುರು ತೆರೆದುಕೊಳ್ಳುವ ಸಿರಿಮನೆ ಜಲಪಾತದ ದೃಶ್ಯ ಅತ್ಯಂತ ರಮಣೀಯ….ಸುಮಾರು ನೂರು ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯ ನೋಡಿಯೇ ಅನುಭವಿಸಬೇಕು…ಪ್ರಕೃತಿ ಸೌಂದರ್ಯದ ಚಡಲುವಿನ ಖನಿ ಸಿರಿಮನೆ ಫಾಲ್ಸ್… ಇಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ಕೊನೆಯಿಲ್ಲ…ಅಪಾಯಕ್ಕೆ ಎಡೆಗೊಡದಂತೆ ಜಲಪಾತದ ಸೌಂದರ್ಯ ಸವಿಯಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!