Oplus_0
Spread the love

 

ಕಡೂರು: ಟಾಟಾನಗರ- ಯಶವಂತಪುರ ರೈಲಿನಲ್ಲಿ  ಕಡೂರು ಅಬಕಾರಿ ಅಧಿಕಾರಿಗಳು ಸುಮಾರು 2.17 ಲಕ್ಷ ಮೌಲ್ಯದ ಮಾದಕ ಪದಾರ್ಥಗಳನ್ನು ಕಡೂರು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚಿಕ್ಕಜಾಜೂರಿನಿಂದಲೇ ತಪಾಸಣೆ ಮಾಡಿಕೊಂಡು ಬಂದ ಅಬಕಾರಿ ಇಲಾಖೆ ಅಧಿಕಾರಿಗಳು   ವಾರಸುದಾರರಿಲ್ಲದ ಚೀಲವೊಂದರಲ್ಲಿ 1.5 ಕೆ.ಜಿ. ಒಣ ಗಾಂಜಾ, 25ಗ್ರಾಂ ಎಂಡಿಎಂಎ ಮತ್ತು 37 ಭಾಂಗ್ ಚಾಕೊಲೇಟ್‌ಗಳು ಪತ್ತೆಯಾಗಿವೆ ಎಂದು ಕಡೂರು ಅಬಕಾರಿ  ಎಸೈ ಎಲ್.ಸಿ.
ಸಂದೀಪ್  ಮಾಹಿತಿ ನೀಡಿದ್ದಾರೆ.  ಅಬಕಾರಿ ಉಪನಿರೀಕ್ಷಕ ನಾಗೇಂದ್ರ ಎಸ್, ಅಬಕಾರಿ ಸಿಬ್ಬಂದಿ ಉಮೇಶ್, ಈರಪ್ಪ, ವಾಹನ ಚಾಲಕ ಅಶೋಕ್ ಕಾರ್ಯಾಚರಣೆ ತಂಡದಲ್ಲಿ ಇದ್ದರು.

 

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!