ಕಡೂರು : ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮಿನ ಯುವಕರ ನಡುವೆ ಬುಧವಾರ ಗಲಾಟೆ ನಡೆದಿದ್ದು, ಓರ್ವ ಯುವಕನ ಕೈಬೆರಳಿಗೆ ಪೆಟ್ಟಾಗಿದೆ.
ಪಟ್ಟಣದ ಕನಕ ವೃತ್ತದಲ್ಲಿ ಇಬ್ಬರು ಯುವಕರು ಮತ್ತು ಅನ್ಯ ಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಮಯ ಒಬ್ಬ ಯುವಕನ ಮೇಲೆ ಹಲ್ಲೆ ನಡೆದು ಕೈಬೆರಳಿಗೆ ಪೆಟ್ಟಾಗಿದೆ
ಹಲ್ಲೆಗೊಳಗಾದ ಸಂದೀಪ್ ಮತ್ತು ಮಂಜು ಎಂಬ ಇಬ್ಬರು ಯುವಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
.
.ಘಟನೆ ಸಂಭವಿಸಿದ ಕನಕ ವೃತ್ತದಲ್ಲಿ ಜನರು ಗುಂಪುಗೂಡಿದ್ದು, ಕಡೂರು ಪೊಲೀಸರು ಗುಂಪನ್ನು ಚದರಿಸಿದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಭೇಟಿ ನೀಡಿದರು. ಸಿಪಿಐ ರಫೀಕ್ ಹಾಗೂ ಪಿಎಸ್ಐ ಪವನ್ ಕುಮಾರ್ ಇದ್ದರು.
