ಚಿಕ್ಕಮಗಳೂರು: ಐಪಿಎಲ್ ಕ್ರಿಕೆಟ್ ಫೈನಲ್ ನಲ್ಲಿ ಆರ್.ಸಿ.ಬಿ.ಗೆಲುವಿಗೆ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.
ಸ್ವತಃ ಶಾಸಕ ಎಚ್.ಡಿ.ತಮ್ಮಯ್ಯ ಸಂಭ್ರಮದಲ್ಲಿ ಆರ್‌ಸಿಬಿ ಅಭಿಮಾನಿಗಳ ಜೊತೆ ಭಾಗಿಯಾದರು. ಅಜಾದ್ ಪಾರ್ಕ್ ಬಳಿ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಅಭಿಮಾನಿಗಳೆ ನಮ್ಮ ಮನೆ ದೇವ್ರು, ದೇಹ ಕನ್ನಡ..ಜೀವ ಕನ್ನಡ ಹಾಡಿಗೆ ಹೆಜ್ಜೆ ಹಾಕಿದರು..
