ಕಡೂರು: ತಾಲ್ಲೂಕು ಆಡಳಿತ ಕಚೇರಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ ಕಳೆದ ನಾಲ್ಕೈದು ದಿನಗಳಿಂದ ಮುಚ್ಚಿದ್ದು, ಕಚೇರಿ ಕೆಲಸಗಳಿಗೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಈ ಶೌಚಾಲಯ ಪಾವತಿಸಿ ಉಪಯೋಗಿಸುವ ಶೌಚಾಲಯವಾಗಿದೆ.ತಾಲ್ಲೂಕು ಕಚೇರಿ ಮತ್ತು ಉಪನೊಂದಣಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಇದು ಬಹು ಅನುಕೂಲಕರವಾಗಿತ್ತು. ಈಗ ಇದನ್ನು ಯಾಕೆ ಮುಚ್ಚಿದ್ದಾರೆಂಬ ಬಗ್ಗೆಯೂ ಮಾಹಿತಿಯಿಲ್ಲ. ಸಾರ್ವಜನಿಕರು ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಪಾಳುಬಿದ್ದ ತಹಶೀಲ್ದಾರ್ ನಿವಾಸದ ಆವರಣವ, ತಾಲ್ಲೂಕು ಪಂಚಾಯಿತಿ ಹಿಂಭಾಗದಲ್ಲಿರುವ ಶಕ್ತಿ ಸೌಧದ ಪಕ್ಕದ ಜಾಗವನ್ನೆ ಶೌಚಾಲಯವನ್ನಾಗಿ ಉಪಯೋಗಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದವರು ಈ ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

