ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ಬೆಳಿಗ್ಗೆ ಶ್ರೀ ಸ್ವರ್ಣಾಂಬ ದೇವಿ ಚಿಕ್ಕರಥೋತ್ಸವ ಮತ್ತು ಚಂಡಿಕಾ ಹೋಮ ಭಕ್ತಿ ಭಾವದಿಂದ ನೆರವೇರಿತು.


ಚಿಕ್ಕರಥೋತ್ಸವ
ಬೆಳಿಗ್ಗೆ ನಿತ್ಯ ಪೂಜೆಯ ನಂತರ ದೇವಿಯ ಉತ್ಸವ ವಿಗ್ರಹವನ್ನು ಆಲಂಕೃತ ಚಿಕ್ಕರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದೊಳಗೆ ಉತ್ಸವ ನಡೆಸಲಾಯಿತು. ಉತ್ಸವ ದೇವಿ ಆಲಯದ ಮುಂದೆ ಗ್ರಾಮಸ್ಥರು ಪೂಜೆ ಸಲ್ಲಿಸಿದ ನಂತರ .ಮತ್ತೆ ದೇವಸ್ಥಾನದ ತನಕ ರಥವನ್ನೆಳೆದು ತರಲಾಯಿತು.
ನಂತರ ವಾಡಿಕೆಯಂತೆ ಚಂಡಿಕಾ ಹೋಮ ನೆರವೇರಿಸಲಾಯಿತು.ಪುರೋಹಿತ ದೇವೀಪ್ರಸಾದ ಶರ್ಮಾ ಹಾಗೂ ತಂಡದವರು ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ಮತ್ತು ಸದಸ್ಯರು ಇದ್ದರು.

