Spread the love

ಕಡೂರು. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಹಕ್ಕು ಗಳಿಗಿರುವಷ್ಟೆ ಆದ್ಯತೆಯನ್ನು ಕರ್ತವ್ಯಗಳಿಗೂ ನೀಡಲಾಗಿದೆ ಎಂದು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನದ ಆಶಯಗಳನ್ನು ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ವೈವಿದ್ಯತೆಯಲ್ಲಿ ಏಕತೆ ಕಾಯ್ದುಕೊಳ್ಳಲು, ಸಮಾಜದಲ್ಲಿ ಸೌಹಾರ್ದಯುತ ಬದುಕು ಸಾಗಿಸಲು ಪರಿಹಾರಗಳೂ ಇವೆ ಎಂದು ಅವರು ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಕಡೂರು ಮಂಡಲಾಧ್ಯಕ್ಷ ದೇವಾನಂದ್, ಮಲ್ಲಿಕಾರ್ಜುನ್ ಶೂದ್ರಶ್ರೀನಿವಾಸ್,ಕಡೂರಳ್ಳಿ ಪ್ರಶಾಂತ್, ಶಾಮಿಯಾನ ಚಂದ್ರು ಮತ್ತಿತರರು ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!