ಅಸ್ವಸ್ಥ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು
ಕಡೂರು: ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯೋರ್ವರು ರಕ್ತದೊತ್ತಡ ಕುಸಿತದಿಂದ ತೀವ್ರ ಅಸ್ವಸ್ಥರಾಗಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಸಕಾಲಕ್ಕೆ ಚಿಕಿತ್ಸೆ ದೊರೆತು ಅಪಾಯದಿಂದ ಪಾರಾದ ಘಟನೆ ಶುಕ್ರವಾರ ತಾಲ್ಲೂಕಿನ ಯಗಟಿಪುರದಲ್ಲಿ ನಡೆದಿದೆ.
ಹೊಳೆಹೊನ್ನೂರಿನ ಮಹಿಳೆಯೊಬ್ಬರು ಯಗಟಿಪುರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದಿದ್ದರು. ಉಪವಾಸದಿಂದ ದೇವಸ್ಥಾನದಲ್ಲಿ ವೃತ ಮಾಡುತ್ತಿದ್ದ ಅವರು ರಕ್ತದೊತ್ತಡ ಕಡಿಮೆಯಾಗಿ ಏಕಾಏಕಿ ಕುಸಿದು ಬಿದ್ದರು. ವಿಷಯ ತಿಳಿದ ಯಗಟಿ ಪಿಎಸೈ ಶಾಹೀದ್ ಅಫ್ರೀದಿ, ಹೆಡ್ ಕಾನ್ಸ್ಟೇಬಲ್ ರಂಗನಾಥ್ ಹಾಗೂ ಸಿಬ್ಬಂದಿ ಕೂಡಲೇ ಮಹಿಳೆಯನ್ನು ಪೊಲೀಸ್ ಜೀಪಿನಲ್ಲಿ ಯಗಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಏರ್ಪಾಟು ಮಾಡಿದರು. ಮಹಿಳೆ ಅಪಾಯದಿಂದ ಪಾರಾಗಿದ್ದು,ಚೇತರಿಸಿಕೊಳ್ಳುತ್ತಿದ್ದಾರೆ ಪೊಲೀಸರ ಮಾನವೀಯ ನಡೆಗೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗಿದೆ.
