
ಕಡೂರು : ಬಂಜಾರ ಮತ್ತು ಭೋವಿಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಒಳಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಿ ಮಾ.24ಕ್ಕೆ ರಾಜ್ಯಾದ್ಯಂತ ಕರೆ ನೀಡಿರುವ ಬೆಂಗಳೂರು ಚಲೋ ಪ್ರತಿಭಟನೆಗೆ ತಾಲ್ಲೂಕಿನ ಬಂಜಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ಕುಮಾರನಾಯ್ಕ ಮನವಿ ಮಾಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸಮಾಜದ ಮುಖಂಡರ ಸಭೆ ಬಳಿಕ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಕಾನೂನಿನಲ್ಲಿ ಅವಕಾಶವಿರುವ ಶೇ.15ರಷ್ಟು ಮೀಸಲಾತಿ ವಿಚಾರವಾಗಿ ಚರ್ಚಿಸಲು ರಾಜ್ಯ ಸರಕಾರ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಮಾ.27ಕ್ಕೆ ಸಚಿವ ಸಂಪುಟ ಸಭೆ ಕರೆದಿದ್ದು, ಬಂಜಾರ, ಭೋವಿ ಮತ್ತು ಕೊರಚ ಕೊರಮ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಅನ್ಯಾಯವಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಒಳಮೀಸಲಾತಿ ವಿಚಾರವಾಗಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹಾಗೂ ಭೋವಿಪೀಠದ ಶ್ರೀ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿಯ ನೇತೃತ್ವದಲ್ಲಿ ಕರೆಕೊಟ್ಟಿರುವ ಬೃಹತ್ ಪ್ರತಿಭಟನೆಗೆ ನಾಲ್ಕೂ ಸಮಾಜದ ಬಂಧುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಜಾರ ಸಂಘದ ತಾಲ್ಲೂಕು ಪ್ರಧಾನಕಾರ್ಯದರ್ಶಿ ಪ್ರಕಾಶ ಎಂ. ನಾಯ್ಕ ಮಾತನಾಡಿ, ಶೇ.15ರಷ್ಟು ಈ ಹಿಂದೆ ಜಾರಿಯಾಗಿರುವ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಪಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ನಾಗರಾಜ್, ಬಂಜಾರ ಸಮಾಜದ ಮುಖಂಡರಾದ ರಾಜಾನಾಯ್ಕ ಸತೀಶ್ ನಾಯ್ಕ, ದೇವರಾಜ್‌ನಾಯ್ಕ, ಶ್ರೀನಿವಾಸ್‌ನಾಯ್ಕ, ದೇವರಾಜ್‌ನಾಯ್ಕ, ವಕೀಲ ರಾಮಚಂದ್ರನಾಯ್ಕ, ಶ್ರೀನಿವಾಸ್‌ನಾಯ್ಕ ರಾಜೇಶ್‌ನಾಯ್ಕ, ರಂಗನಾಥ್‌ನಾಯ್ಕ, ಮಿಥುನ್, ಶಶಿಕುಮಾರ್, ವಸಂತನಾಯ್ಕ, ಜಯಂತ್, ರಘು, ಸುರೇಶ್ ಇದ್ದರು.
