Spread the love
 ಕಡೂರು : ತಾಲ್ಲೂಕಿನ ಹಿರೇನಲ್ಲೂರಿನ ಕಾವಲು ಪ್ರದೇಶದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಸುಮಾರು 6ವರ್ಷದ ಗಂಡು ಚಿರತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಟ್ಟಿದ್ದ ಬೋನಿನಲ್ಲಿ ಗುರುವಾರ ಸೆರೆಯಾಗಿದೆ.
ಕಳೆದ ಒಂದು ತಿಂಗಳ ಹಿಂದೆ
ಚಿರತೆಯ ಉಪಟಳ ಹೆಚ್ಚಾಗಿ ಈ ಭಾಗದ ರೈತಾಪಿ ವರ್ಗ ಆತಂಕಗೊಂಡಿತ್ತು. ಜಾನುವಾರುಗಳು,ನಾಯಿಗಳು ಚಿರತೆ ಧಾಳಿಗೆ ಬಲಿಯಾಗಿದ್ದವು.  ನಿರಂತರ ಚಿರತೆ ಸಂಚಾರದಿಂದ ರೋಸಿಹೋಗಿದ್ದ
ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆಹಿಡಿಯಲು ಬೋನ್ ಇಟ್ಟು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.
ಕಳೆದ ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿ ಇಡಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿ ರೈತರು ನಿಟ್ಟುಸಿರಿಟ್ಟಿದ್ದಾರೆ.
ಸೆರೆಸಿಕ್ಕಿರುವ ಚಿರತೆಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮುತ್ತೊಡಿ ಅರಣ್ಯ ಪ್ರದೇಶದಲ್ಲಿ ಬಿಡಲು ಕ್ರಮ ವಹಿಸಲಾಗುತ್ತದೆ ಎಂದು ವಲಯಾರಣ್ಯಧಿಕಾರಿ ಹರೀಶ್ ತಿಳಿಸಿದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!