
.ತರೀಕೆರೆ: ಕೆಲವೇ ದಿನಗಳ ಹಿಂದೆ ಚಿರತೆ ಧಾಳಿಗೆ ಐದು ವರ್ಷದ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಬಾಲಕನೊಬ್ಬನ ಮೇಲೆ ಚಿರತೆ ಧಾಳಿ ಮಾಡಿದೆ.
ತರೀಕೆರೆ ತಾಲ್ಲೂಕಿನ ಭೈರಾಪುರ ಗ್ರಾಮದಲ್ಲಿ ಮನೆಯ ಬಳಿ ನಿಂತಿದ್ದ 11 ವರ್ಷದ ಬಾಲಕ ಹೃದಯ್ ಮೇಲೆ ಶುಕ್ರವಾರ ಚಿರತೆ ಧಾಳಿ ಮಾಡಿದೆ. ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದಾನೆ. ಗಂಭೀರ ಗಾಯಗೊಂಡ ಹೃದಯ್ ನನ್ನು ಶಿಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಲಿಂಗದಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
