ಕಡೂರು: ನಮ್ಮ ನೆಲದ ಇತಿಹಾಸವನ್ನು ಮುಂದಿನ ಪೀಳಿಗೆಗೂ ತಿಳಿಸುವ ಕಾರ್ಯವನ್ನು ರಾಜ್ಯ ಇತಿಹಾಸ ಅಕಾಡೆಮಿ ಮಾಡುತ್ತಿದೆ
– ಡಾ.ದೇವರ ಕೊಂಡಾ ರೆಡ್ಡಿ.ಅಧ್ಯಕ್ಷರು. ಕರ್ನಾಟಕ ಇತಿಹಾಸ ಅಕಾಡೆಮಿ.
————
ಕಡೂರಿನಲ್ಲಿ ಅನಿರೀಕ್ಷಿತವಾಗಿ ಭೇಟಿಯಾದ ಡಾ.ದೇವರಕೊಂಡಾರೆಡ್ಡಿ ಅವರೊಡನೆ ಕೆಲ ಸಮಯ ಕಳೆದಾಗ ಅವರ ಆಶಯಗಳು ಹೀಗಿದ್ದವು…….
ಇತಿಹಾಸದ ಆಸಕ್ತಿ ಎಲ್ಲರಲ್ಲೂ ಬೆಳೆಯಬೇಕು.ಆದರೆ ಆ ಆಸಕ್ತಿ ಬಹಳ ಕಡಿಮೆಯೆಂಬುದು ಬೇಸರದ ಸಂಗತಿ. ಆದರೆ ಅದಕ್ಕಾಗಿ ಹತಾಶೆಗೊಳ್ಳಬೇಕಿಲ್ಲ. ಆಸಕ್ತಿ ಇರುವಷ್ಟೇ ಜನ ನಮ್ಮ ಇತಿಮಿತಿಯಲ್ಲೆ ಕೆಲಸ ಮಾಡಿದರೆ ಅದೇ ಇತಿಹಾಸಕ್ಕೆ ನಾವು ನೀಡುವ ಬಹುದೊಡ್ಡ ಕೊಡುಗೆಯಾಗುತ್ತದೆ. ಎಲ್ಲರಿಂದಲೂ ಇತಿಹಾಸದ ಆಸಕ್ತಿ ನಿರೀಕ್ಷಿಸುವುದು ಸಲ್ಲದು. ಆಸಕ್ತಿ ಇರುವಷ್ಟೇ ಜನ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಸಂಸ್ಕೃತಿಯ ಕುರುಹುಗಳನ್ನು ಉಳಿಸಲು ಒಂದಿಷ್ಟು ಶ್ರಮಿಸೋಣ.
ಇತಿಹಾಸ ಅಕಾಡೆಮಿ ರಾಜ್ಯದ ಎಲ್ಲ ಗ್ರಾಮಗಳಲ್ಲಿರುವ ಐತಿಹಾಸಿಕ ಸ್ಮಾರಕಗಳು, ಚೆಲ್ಲಾಪಿಲ್ಲಿಯಾಗಿರುವ ವೀರಗಲ್ಲುಗಳು, ಶಾಸನಗಳು ಮುಂತಾದವುಗಳ ಐತಿಹಾಸಿಕ ಮಹತ್ವವನ್ನು ಶೋಧಿಸಿ ಅವುಗಳನ್ನು ಆಸಕ್ತರಿಗೆ ತಿಳಿಸುವ ಕಾರ್ಯ ಮಾಡುತ್ತಿದೆ. ಪ್ರತಿ ಗ್ರಾಮಗಳಲ್ಲಿರುವ ಇಂತಹ ಐತಿಹಾಸಿಕ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಊರು- ನನ್ನ ಬೇರು ಎಂಬ ಕಲ್ಪನೆಯಲ್ಲಿ ಎಲ್ಲ ಗ್ರಾಮಪಂಚಾಯಿತಿಗಳ ಪಿಡಿಓ ಗಳು, ಇತಿಹಾಸ- ಸಂಸ್ಕೃತಿ ಆಸಕ್ತರು ಸೇರಿ ಉಳಿಸುವ ಕಾರ್ಯ ಪ್ರಗತಿಯಲ್ಲಿದೆ.. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ಉತ್ಸಾಹಪೂರಿತ ಸ್ಪಂದನೆ ವ್ಯಕ್ತವಾಗಿದೆ. ಕಡೂರು ತಾಲ್ಲೂಕಿನಲ್ಲಿ ಅತ್ಯಂತ ಮಹತ್ವಪೂರ್ಣ ಇತಿಹಾಸವಿದೆ. ಅವೆಲ್ಲವೂ ಮುಂದಿನ ಪೀಳಿಗೆಗೆ ಉಳಿಯಬೇಕೆಂಬುದು ನಮ್ಮ ಆಶಯ. ಈ ಕಾರ್ಯದಲ್ಲಿ ಯುವಜನ ಸೇವಾ ಇಲಾಖೆಯ ಜಿಲ್ಲಾ ನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿಯವರ ಕಾರ್ಯ ಶ್ಲಾಘನೀಯ…
– ಇದು ಡಾ.ದೇವರಕೊಂಡಾರೆಡ್ಟಿಯವರ ಮಾತುಗಳು…..
