ಆತ್ಮೀಯರೆ
ನಮಸ್ಕಾರ..
ನಾನು ಆಕಸ್ಮಿಕವಾಗಿ ಪತ್ರಿಕೋದ್ಯಮಕ್ಕೆ ಬಂದಿದ್ದು ಒಂದು ತಮಾಷೆಯ ಘಟನೆ. ಕಡೂರಿನಲ್ಲಿ ಒಂದು ವಾರಪತ್ರಿಕೆ ಆರಂಭಿಸಬೇಕೆಂಬ ಆಸೆ ಸ್ನೇಹಿತ ಲೋಕೇಶ್ವರನದು. ಜಿಲ್ಲಾ ರಕ್ಷಾ ಎಂಬ ಪತ್ರಿಕೆಗೆ ನನ್ನನ್ನು ಸಂಪಾದಕ ಎಂದು ಗುರುತಿಸಿದ್ದು ಆತನೇ…ನಂತರದಲ್ಲಿ ಬದುಕು ಎತ್ತೆತ್ತಲೋ ಕರೆದೊಯ್ದಿತು……
ಮತ್ತೆ ಕಡೂರಿಗೆ ವಾಪಸ್ಸಾದ ನಂತರ ಚಿಕ್ಕಮಗಳೂರಿನ
ಜನಮಿತ್ರ ಪತ್ರಿಕೆಗೆ ಕಡೂರು ತಾಲ್ಲೂಕು ವರದಿಗಾರನಾಗಿ ಎರಡು ವರ್ಷ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೆ ಪ್ರಜಾವಾಣಿ ವರದಿಗಾರನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆಯಿತು. 13 ವರ್ಷಗಳ ಕಾಲ ಆ ಪತ್ರಿಕೆಗೆ ತಾಲ್ಲೂಕು ಅರೆಕಾಲಿಕ ವರದಿಗಾರನಾಗಿ ಕಾರ್ಯ ನಿರ್ವಹಿಸಿ ಈಗ ಅದರಿಂದ ಹೊರಬಂದು ಸ್ವಂತಂತ್ರವಾಗಿ
matcherinews.com ಎಂಬ ವೆಬ್ ನ್ಯೂಸ್ ಮೂಲಕ ಮಾಧ್ಯಮ ರಂಗದಲ್ಲೆ ಮುಂದುವರೆಯುತ್ತಿದ್ದೇನೆ. ದಿನ ನಿತ್ಯದ ವರದಿಗಳ ಜೊತೆ ಒಂದಿಷ್ಟು ಹೊಸ ಆಲೋಚನೆಗಳೂ ಇವೆ. ಅವೆಲ್ಲವೂ ಈ ವೆಬ್ ಸೈಟ್ ನಲ್ಲಿ ಲಭ್ಯ.
ಕಳೆದ 15 ವರ್ಷಗಳಲ್ಲಿ ನನಗೆ ದೊರೆತ ಅನುಭವ ಅತ್ಯಂತ ವಿಭಿನ್ನ. ಪತ್ರಿಕೋದ್ಯಮದಲ್ಲಿರುವ ವೃತ್ತಿ ಮಾತ್ಸರ್ಯ ನಿರಂತರವಾಗಿ ಹೊಸ ಹೊಸ ಆಲೋಚನೆಗೆ ದಾರಿಯಾಯಿತೇ ವಿನಃ ಎಲ್ಲಿಯೂ ಕುಗ್ಗಿಸಲಿಲ್ಲ.
“ಕೆಲ ಮರಗಳು ಮುರಿದು ಹೋಗುತ್ತವೆ- ಬಗ್ಗುವುದಿಲ್ಲ”
” ನಾನು ನೂರು ಬಾರಿ ಗೆದ್ದು ನಿವೃತ್ತನಾಗಿಲ್ಲ- ಸಾವಿರ ಬಾರಿ ಸೋತವನು…..ಪ್ರತಿ ವಿಫಲತೆ ಮತ್ತೊಂದು ಚಿಂತನೆಗೆ ಹಾದಿಯಷ್ಟೆ.
ಅದೇನೇ ಆದರೂ ಎಲ್ಲರೊಳಗೊಂದಾಗಿರುವ ಮಂಕುತಿಮ್ಮನಂತಾಗುವಾಸೆ.
ಎಂದಿನಂತೆ ತಮ್ಮೆಲ್ಲರ ಸಹಕಾರವಿರಲಿ.
– ತಮ್ಮ
ಬಾಲುಮಚ್ಚೇರಿ.
