Spread the love

ಮತ್ತೆ ಕೋವಿಡ್….

ಕೊರೊನಾ ಕಾಲಘಟ್ಟದ ಕರಾಳತೆಯ ನೆನಪಿನ್ನೂ ಮಾಸಿಲ್ಲ. ಅಂತಹ ಮಹಾಮಾರಿ ಮತ್ತೆ ಬಂದಿದೆ. ಅದು ಹಿಂದಿನಂತೆ ವಿಜೃಂಭಿಸುತ್ತದೆಯೋ ಅಥವಾ ಹಾಗೆಯೇ ಮಾಯವಾಗುತ್ತದೋ ತಿಳಿಯದು. ಆದರೆ ಖಂಡಿತವಾಗಿಯೂ ಆತಂಕಕಾರಿ. ಹಾಗಾಗಿ ಆರೋಗ್ಯ ಇಲಾಖೆ ಪೂರ್ಣ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಲೇ ಕೈಗೊಳ್ಳಬೇಕು.
ಬಹುಮುಖ್ಯವಾಗಿ ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕ ಸಹಭಾಗಿತ್ವ ಮುಖ್ಯ.
ಕೊರೊನಾ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಹೊಸದಾಗಿ ಕಲಿಯುವ ಅಗತ್ಯವಿಲ್ಲ. ಕೊರೊನಾ ಹರಡುವ ಬಗೆ, ಅದಕ್ಕೆ ಚಿಕಿತ್ಸೆ ಎಲ್ಲವೂ ಗೊತ್ತು. ಹಾಗಾಗಿ ಸಾರ್ವಜನಿಕರು ಸ್ವಪ್ರೇರಣೆಯಿಂದ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು.
ಈಗಾಗಲೇ ಮಳೆಗಾಲ ಆರಂಭವಾಗಿದೆ. ಈ ಸಂದರ್ಭದಲ್ಲಿ ಸಾಮಾನ್ಯವಾದ ಶೀತ ಜ್ವರ ಯಾವುದು, ಕೊರೊನಾ ಯಾವುದು ಎಂಬ ಸಂಶಯ ಸಾಮಾನ್ಯವೇ. ಸ್ವಲ್ಪ ಶೀತ ಜ್ವರ ವಿದ್ದರೆ ತೊಂದರೆಯಿಲ್ಲ. ಆದರೆ ಪದೇ ಪದೇ ಪುನರಾವರ್ತನೆಯಾದರೆ ಕೂಡಲೇ ತಪಾಸಣೆ ಮತ್ತು ಚಿಕಿತ್ಸೆ ಅತ್ಯಗತ್ಯ.
ಕೋವಿಡ್ ಮತ್ತೆ ಮೊದಲಿನಂತೆ ದೊಡ್ಡ ಪ್ರಮಾಣದಲ್ಲಿ ಬರುತ್ತದೆ ಯೋ ಇಲ್ಲವೋ ಅದರ ಪ್ರಶ್ನೆ ಬೇಡ…. ಆದರೆ ನಮಗೆ ಕ್ವಾರಂಟೈನ್, ಲಾಕ್ ಡೌನ್, ಸೀಲ್ ಡೌನ್ ಇವೆಲ್ಲ ಕರ್ಕಶ ಶಬ್ದಗಳು. ಮತ್ತೆ ನಮಗೆ ಕೇಳುವದೇ ಬೇಡ….ಖಂಡಿತ ಆ ಕಾಲಘಟ್ಟ ನಿಜಕ್ಕೂ ಕರಾಳವಾದುದು…ಅದರ ಪುನರಾವರ್ತನೆ ಬೇಡ…. ಸರ್ಕಾರದ ಕ್ರಮಗಳು, ಆರೋಗ್ಯ ಇಲಾಖೆಯ ಸೂಚನೆಗಳನ್ನು ಪರಿಪಾಲಿಸಬೇಕು….
ಸ್ಯಾನಿಟೈಸರ್ ಬಳಸಿ, ಸರ್ಕಾರ ಕಡ್ಡಾಯ ಮಾಡದಿದ್ದರೂ ಮಾಸ್ಕ್ ಧರಿಸಿ….ಆದಷ್ಟೂ ಜನಜಂಗುಳಿಯಿಂದ ದೂರವಿರಿ.. ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೋರಿಸಿ…
ಕೊರೊನಾ ಮತ್ತೆ ತನ್ನವಪ್ರತಾಪ ತೋರಿಸದಂತಿರಲು ಸರ್ಕಾರ,ಆರೋಗ್ಯ ಇಲಾಖೆಯ ಜೊತೆ
 ಸಾರ್ವಜನಿಕರ ಸ್ವಯಂ ಪ್ರೇರಿತ ಸಹಕಾರ ಬಹುಮುಖ್ಯ
ಕೊರೊನಾ ಆತಂಕ ಬೇಡ…ಮುನ್ನೆಚ್ಚರಿಕೆ ಇರಲಿ ಕಡ್ಡಾ

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!