ಚಿಕ್ಕಮಗಳೂರು: ಕಳಸ ತಾಲ್ಲೂಕು ಹಳುವಳ್ಳಿ ಬಳಿಯ ಮುಜೇಖಾನ್ ನಲ್ಲಿ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಈ ಪರಿಸರದಲ್ಲಿ ಬಹಳಷ್ಟು ದಿನದಿಂದ ಓಡಾಡುತ್ತಿದ್ದ ಚಿರತೆ ಜನರಲ್ಲಿ ಆತಂಕ ಹುಟ್ಟಿಸಿತ್ತು.ಜಾನುವಾರುಗಳು,ನಾಯಿಗಳ ಮೇಲೆ ಧಾಳಿ ಮಾಡುತ್ತಿದ್ದ ಚಿರತೆಯಿಂದ ಜನರು ಓಡಾಡಲೂ ಭಯಪಡುವ ವಾತಾವರವಿತ್ತು.ಚಿರತೆ ಸೆರೆಗೆ ಜನರು ಒತ್ತಾಯಿಸಿದ್ದರು. ಅರಣ್ಯ ಇಲಾಖೆ ಕ್ರಮದಿಂದ ಚಿರತೆ ಸೆರೆಯಾಗಿದ್ದು,ಜನರು ನಿಟ್ಟುಸಿರು ಬಿಟ್ಟಿದ್ದಾರೆ.
