ಕಡೂರು:ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳನ್ನು ಸುಸಜ್ಜಿತ ಗೊಳಿಸುವ ಮೂಲಕ ಸುಗಮ ಮತ್ತು ಶೀಘ್ರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಕಂಸಾಗರ ಸೋಮಶೇಖರ್ ಹೇಳಿದರು.
ಬುಧವಾರ ಕಾಮನಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆ.ದಾಸರಹಳ್ಳಿ ಗೇಟ್ ನಿಂದ ಕಾಮನಕೆರೆ ರಸ್ತೆ ತನಕ ₹35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯವಾಗಿ ಗ್ರಾಮೀಣ ಭಾಗದ ರಸ್ತೆಗಳು ಸುಸಜ್ಜಿತಗೊಂಡರೆ ಶೀಘ್ರದಲ್ಲಿ ಪಟ್ಟಣ ಪ್ರದೇಶಗಳಿಗೆ ತೆರಳಲು ಅನುಕೂಲವಾಗುತ್ತದೆ. ಇದನ್ನು ಮನಗಂಡು ಶಾಸಕರು ಅಗತ್ಯವಿದ್ದೆಡೆಯಲ್ಲೆಲ್ಲ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ.ಕ್ಷೇತ್ರದ ಅಭಿವೃದ್ಧಿಗೆ ಇದು ಪೂರಕವಾಗಿದೆ ಎಂದರು.
ಪುರಸಭೆ ಸದಸ್ಯ ಕೆ.ಎಂ.ಮೋಹನ್ ಕುಮಾರ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ರಸ್ತೆ ಸಂಪರ್ಕ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಾಪಾರ ವಹಿವಾಟು ಅಥವಾ ಮತ್ಯಾವುದೇ ಕಾರ್ಯಗಳಿಗೆ, ಆಸ್ಪತ್ರೆಗೆ ತೆರಳಲು, ಸರಕು ಸಾಗಾಣಿಕೆ ಎಲ್ಲದಕ್ಕೂ ಅನುಕೂಲವಾಗುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿದ್ಧಾರೆ ಎಂದರು.
ಕಾಮನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ದಾಸರಹಳ್ಳಿ, ಉಪಾಧ್ಯಕ್ಷೆ ವರಲಕ್ಷ್ಮಿ , ಕಾಂಗ್ರೆಸ್ ಮುಖಂಡರಾದ ಮಾಜಿ ಅಧ್ಯಕ್ಷರಾದ ಮಮತ, ಅಂಗಡಿ ಮಲ್ಲೇಶಪ್ಪ, ನಾಗರಾಜಪ್ಪ ವಿನಯ್ ವಳ್ಳು, ಮಲ್ಲೇಶ್ವರ ವಸಂತಕುಮಾರ್ ಇದ್ದರು.

