ಕಡೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಊರಿನ ಆಲಯ ಪ್ರವೇಶ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಸಾಂಪ್ರದಾಯಿಕವಾಗಿ ವೇದಾವತಿ ನದಿ( ಕುಂತೀಹೊಳೆ) ಯಲ್ಲಿ ಮೃತ್ತಿಕಾ ಸಂಗ್ರಹಣೆ ನಡೆದ ನಂತರ ಮಲ್ಲೇಶ್ವರದ ತಿಮ್ಮಯ್ಯನವರ ಮನೆಯಲ್ಲಿ ಸ್ವರ್ಣಾಙಬ ದೇವಿಯವರಿಗೆ ಲಲಿತಾ ಸಹಸ್ರನಾಮ ಪೂರ್ವಕ ಸಾಂಪ್ರದಾಯಿಕ ಪೂಜೆ ನಡೆಸಿದ ನಂತರ ಮಲ್ಲೇಶ್ವರ ಗ್ರಾಮಕ್ಕೆ ಕರೆತರಲಾಯಿತು. ಮಹಿಳೆಯರು ಗ್ರಾಮದ ಪ್ರವೇಶದಲ್ಲೆ ಆರತಿ ಬೆಳಗಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಸಾಗಿದರು.
ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ಮತ್ತು ಧರ್ಮದರ್ಶಿ ಮಂಡಳಿ ಸದಸ್ಯರು ಇದ್ದರು.
