Spread the love

ಕಂದಾಯ ಇಲಾಖೆಯಲ್ಲಿ ಬದಲಾವಣೆಯತ್ತ ನನ್ನ ಗಮನ- ಬೇರೆ ಬದಲಾವಣೆ ಬಗ್ಗೆ ಗೊತ್ತಿಲ್ಲ- ಸಚಿವ ಕೃಷ್ಣ ಭೈರೇಗೌಡ


ಚಿಕ್ಕಮಗಳೂರು: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಸಿನಿಮಾ ಸ್ಕ್ರಿಪ್ಟ್ ತರ ಅಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ.ಇಲ್ಲಿ ಏಳು- ಬೀಳು ಇರುತ್ತದೆ.ಅಡೆ ತಡೆಗಳಿರುತ್ತವೆ.ಅವೆಲ್ಲದರ ನಡುವೆಯೂ ಕೆಲಸ ಮಾಡಿ ಎಂದು ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ.ಎಷ್ಟು ದಿನ ಇರುತ್ತೇವೆಂಬುದಕ್ಕಿಂತ ಇರುವಷ್ಟು ದಿನ ಒಳ್ಳೆ ಕೆಲಸ ಮಾಡಬೇಕು. ಮಾಡುತ್ತೇವೆ ಎಂದರು.

ಯಾವಯಾವುದೋ ಬದಲಾವಣೆ ಗೊತ್ತಿಲ್ಲ.ಕಂದಾಯ ಇಲಾಖೆಯಲ್ಲಿ ಬದಲಾವಣೆ ಮಾಡಬೇಕೆಂದು ಸಿಎಂ‌ ಸೂಚಿಸಿದ್ದಾರೆ. ಬೇರೆ ಬದಲಾವಣೆಗಳ ಬಗ್ಗೆ ತಿಳಿಯದು.ಅದು ನನಗೆ ಬೇಕಾಗಿಲ್ಲ. ಯಾವ ಜನ್ಮದ ಪುಣ್ಯವೋ ಈ ಕೆಲಸ ಮಾಡುವ ಅವಕಾಶ ದೊರೆತಿದೆ. ಅದನ್ನು ಮಾಡುವತ್ತ ನನ್ನ ಗಮನ. ಉಳಿದ ವಿಷಯಗಳತ್ತ ಅಲ್ಲ ಎಂದರು.ಕಡೂರು ಶಾಸಕ ಕೆ.ಎಸ್.ಆನಂದ್ ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!