Spread the love

93 ವರ್ಷ ಕಂಡ ಕಡೂರು ರಾಘವೇಂದ್ರ ಸ್ವಾಮಿ ಮಠ.

– ಜಿಲ್ಲೆಯ ಪ್ರಥಮ‌ಮೃತ್ತಿಕಾ ಬೃಂದಾವನ.

– ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರಿಂದ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ.

ಕಡೂರು: ಪಟ್ಟಣದ ಕೋಟೆಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದ 93 ನೇ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

      ಉಡುಪಿಯ ಕಾಣಿಯೂರು ಮಠದ ಪೀಠಾಧಿಪತಿ ಶ್ರೀ ವಿದ್ಯಾವಲ್ಲಭ ತೀರ್ಥರು ರಾಯರ ಮೃತ್ತಿಕಾ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿದರು. ನಂತರ ಬೃಂದಾವನಕ್ಕೆ ವಿಶೇಷ ಅಲಂಕಾರ ನೆರವೇರಿತು. ಭಕ್ತಾದಿಗಳಿಗೆ ವುದ್ಯಾವಲ್ಲಭ ತೀರ್ಥರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
1932 ರಲ್ಲಿ ಪ್ರತಿಷ್ಟಾಪಿತಗೊಂಡ ಕಡೂರಿನ ಮೃತ್ತಿಕಾ ಬೃಂದಾವನ ಜಿಲ್ಲೆಯ ಪ್ರಥಮ ರಾಯರ ಮೃತ್ತಿಕಾ ಬೃಂದಾವನವೆಂಬ ಹೆಸರು ಪಡೆದಿದೆ.
ರಾಘವೇಂದ್ರಸ್ವಾಮಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಟಿ.ಆರ್.ಮನು, ಪವನ್ ಇದ್ದರು.

Balaji.M.V

By Balaji.M.V

ಸ್ಥಳೀಯ ಸುದ್ದಿಗಳು, ವಿಶೇಷ ಸ್ಥಳಗಳು, ಐತಿಹಾಸಿಕ ಮಹತ್ವದ ತಾಣಗಳ ಕುರಿತು ವಿವರ, ಸಂದರ್ಶನ, ಲೇಖನಗಳು, ವಿಮರ್ಶೆ,ಪ್ರಚಲಿತ ವಿದ್ಯಮಾನಗಳು, ಸಾರ್ವಜನಿಕ ಕುಂದುಕೊರತೆ ಇವೆಲ್ಲವೂ ಇಲ್ಲಿ ಲಭ್ಯ

Leave a Reply

Your email address will not be published. Required fields are marked *

error: Content is protected !!